ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಜೀತದಾಳು ಸಮೀಕ್ಷೆ ಕಾರ್ಯಾಗಾರ

Lingaraj Badiger
Updated On : 29 Jul 2013, 11:07 am

ಶಹಾಪುರ: ತಾಲೂಕಿನಾದ್ಯಾಂತ ಜೀತದಾಳು ಸಮೀಕ್ಷೆ ಕೈಗೊಳ್ಳುವ ಕುರಿತು ಪಟ್ಟಣದ ತಾಪಂ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ ನಡೆಸಲಾಯಿತು.  ತಾಲೂಕಾಡಳಿತ, ಜೀತವಿಮುಕ್ತಿ ಸಂಘಟನೆ ಆಶ್ರಯಲ್ಲಿ ನಡೆದ ಕಾರ್ಯಾಗಾರದಲ್ಲಿ ಸಂಘಟನೆ ರಾಜ್ಯ ಸಂಚಾಲಕ ಉಮೇಶ ಮಾತನಾಡಿ, ಜೀತ ವಿಮುಕ್ತಿ ಸಮೀಕ್ಷಾ ತಂಡವನ್ನು ರಚಿಸಬೇಕು. ವಿವಿಧ ಹಂತದಲ್ಲಿ ತರಬೇತಿ ನೀಡಲು ನುರಿತ ತರಬೇತಿದಾರರನ್ನು ನಿಯೋಜಿಸಬೇಕು. ಜೀತದಾಳುಗಳಾಗಿ ಹೆಚ್ಚಾಗಿ ದುಡಿಯುತ್ತಿರುವವರನ್ನು ಗುರುತಿಸಿ ಅವರಿಗೆ ಪುನರ್ವಸತಿ ಸೇರಿದಂತೆ ಇನ್ನಿತರ ಸರ್ಕಾರದ ಯೋಜನೆಗಳನ್ನು ಕಲ್ಪಿಸಬೇಕು ಎಂದರು. ಜೀತದಾಳು ಪದ್ಧತಿ ಶಾಪವಾಗಿದ್ದು ಸಂಪೂರ್ಣವಾಗಿ ಇದನ್ನು ಅಳಸಿಹಾಕಿ ಸರ್ವರಿಗೂ ಸಮಬಾಳು ದೊರಕಿಸುವ ಪ್ರಯತ್ನ ಸರ್ಕಾರ, ಸಮುದಾಯ, ಸಂಘಟನೆಗಳು ಪ್ರಾಮಾಣಿಕ ಕಾಳಜಿ ವಹಿಸಬೇಕೆಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement