ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನೌಕರರ ಸಂಘಕ್ಕೆ ಭೀಮಣ್ಣ ಅಧ್ಯಕ್ಷ

Rashmi Kasaragodu
Updated On : 30 Jul 2013, 11:30 am

 ಸುರಪುರ: ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾಗಿ ಉಪನ್ಯಾಸಕ ಭೀಮಣ್ಣ ಭೋಸ್ಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ದೇವರಗೋನಾಲ ಗ್ರಾಮದವರಾದ ಭೋಸ್ಗಿ ಅವರು ಕಕ್ಕೇರಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹಾವು ಕಡಿದು ಯುವಕ ಸಾವು
ಸುರಪುರ: ತಾಲೂಕಿನ ಹಂದ್ರಾಳ ಎಸ್.ಡಿ.ಗ್ರಾಮದ ಯುವಕ ಹಾವು ಕಚ್ಚಿ ಮೃತಪಟ್ಟ ಘಟನೆ ಭಾನುವಾರ ಸಂಭವಿಸಿದೆ. ಶಶಿಕುಮಾರ ವೆಂಕಟೇಶ(22) ಮೃತ ಯುವಕ. ತನ್ನ ಹೊಲದಲ್ಲಿ ಹತ್ತಿ ಬೆಳೆಯ ಕೆಲಸದಲ್ಲಿ ನಿರತನಾಗಿದ್ದ ವೇಳೆ ಹಾವು ಕಚ್ಚಿದೆ. ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರ್ಗಾಯಿತ ಶಿಕ್ಷಕರ
ಬಿಡುಗಡೆಗೆ ಒತ್ತಾಯ
ಯಾದಗಿರಿ: ಸರ್ಕಾರದ ಅಧಿಸೂಚನೆಯಂತೆ ಪ್ರಸಕ್ತ ಸಾಲಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಆದೇಶ ಪಡೆದ ಶಿಕ್ಷಕರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಸೋಮವಾರ ವರ್ಗಾವಣೆಗೊಂಡ ಶಿಕ್ಷಕರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು. ಈಗಾಗಲೇ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ವರ್ಗಾವಣೆ ಆದೇಶ ಪಡೆದ ಶಿಕ್ಷಕರನ್ನು ಬಿಡುಗಡೆಗೊಳಿಸಲಾಗಿದೆ. ಆದರೆ ಇಲ್ಲಿ ಮಾತ್ರ ಜಿಪಂ ವತಿಯಿಂದ ತಡೆ ಹಿಡಿಯಲಾಗಿದೆ. ಕಾರಣ ವರ್ಗಾವಣೆಗೊಂಡ ಶಿಕ್ಷಕರಲ್ಲಿ ಕೆಲವರು ಅನೇಕ ರೋಗಳಿಂದ ಬಳಲುತ್ತಿದ್ದಾರೆ. ಶಿಕ್ಷಕರ ಕುಟುಂಬ ವರ್ಗದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಲವಾರು ಜನ ಶಿಕ್ಷಕರು ಪತಿ ಪತ್ನಿ ಪ್ರಕರಣದ ಶಿಕ್ಷಕರಿದ್ದಾರೆ. ಮಾನವೀಯತೆ ದೃಷ್ಟಿಯಿಂದ ಕೌನ್ಸೆಲಿಂಗ್ ಮೂಲಕ ಜಿಲ್ಲೆಯಿಂದ ವರ್ಗಾವಣೆಗೊಂಡ ಸ್ಥಳಗಳಿಗೆ ಶಿಕ್ಷಕರನ್ನು ಬಿಡುಗಡೆ ಮಾಡಬೇಕೆಂದು ಮನವಿ ಪತ್ರದಲ್ಲಿ ಆಗ್ರಹಿದ್ದಾರೆ. ಈ ಸಂದರ್ಭದಲ್ಲಿ ಹಲವಾರು ಶಿಕ್ಷಕರು ಇದ್ದರು.
ಪೊಲೀಸ್ ವಶಕ್ಕೆ 16 ಎಮ್ಮೆಗಳು
ಸುರಪುರ: ರಂಗಂಪೇಟೆಯ ದನಗಳ ಸಂತೆಯಿಂದ ಲಿಂಗಸ್ಗೂರು ತಾಲೂಕಿನ ಗುಡುಗುಂಟಿಗೆ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 16 ಎಮ್ಮೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಇಲ್ಲಿಯ ಠಾಣೆಯಲ್ಲಿ ಕಟ್ಟಿಹಾಕಿದ್ದಾರೆ. 16 ಎಮ್ಮೆಗಳನ್ನು ಸಂತೆಯಲ್ಲಿ ಖರೀದಿಸಿ ಲಾರಿಯಲ್ಲಿ ಹಿಂಸಾತ್ಮಕವಾಗಿ ಎಮ್ಮೆಗಳ ಕಾಲುಗಳನ್ನು ಕಟ್ಟಿಹಾಕಿ ಸಾಗಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಎಮ್ಮೆಗಳನ್ನು ವಶಕ್ಕೆ ತೆಗೆದುಕೊಂಡು ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಠಾಣೆಯಲ್ಲಿ 2 ದಿನಗಳಿಂದ ಎಮ್ಮೆಗಳಿಗೆ ಆರೈಕೆ ಮಾಡುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಎಮ್ಮೆಗಳಿಗೆ ಮೇವು ಹಾಕುವುದು ಮತ್ತು ನೀರನ್ನು ಪೊಲೀಸರೇ ಪೂರೈಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಎಮ್ಮೆಗೆ ಸಂಬಂಧಪಟ್ಟ ಖರೀದಿದಾರರು ನ್ಯಾಯಾಲಯದಿಂದ ಪರವಾನಗಿ ತರುವವರೆಗೂ ಎಮ್ಮೆಗಳ ಆರೈಕೆ ಪೊಲೀಸರಿಗೆ ತಪ್ಪಿದ್ದಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement