ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮಲ್ಲಿಕಾರ್ಜುನ ಖರ್ಗೆ ಕೃಪಾಕಟಾಕ್ಷ..

Rashmi Kasaragodu
Updated On : 30 Jul 2013, 11:27 am

ಗುಲ್ಬರ್ಗ: ಭೀಮಾ ಪ್ರವಾಹದಲ್ಲಿ ನಲುಗಿರುವ ಗ್ರಾಮಗಳ ವೀಕ್ಷಣೆಗೆ ಖರ್ಗೆಯವರು ಕೆಲ ವರ್ಷಗಳ ಹಿಂದೆ ಅಫಜಲ್ಪುರ ಸುತ್ತಾಡಿದಾಗ ಹದಗೆಟ್ಟ ರಸ್ತೆಯಿಂದ ಗರಂ ಆಗಿದ್ದರ ಫಲ ಇದು. ಸಂಸದರಾದಾಗ ಅಂತಾರಾಜ್ಯ ಸಂಪರ್ಕ ರಸ್ತೆ ಯೋಜನೆಯಲ್ಲಿ ಗುಲ್ಬರ್ಗ- ಹೊಸೂರ ರಸ್ತೆ ಕೈಗೆತ್ತಿಕೊಳ್ಳುವೆ ಎಂದಿದ್ದರು. ನುಡಿದಂತೆ ನಡೆದಿದ್ದಾರೆ. ಆದರೆ ರಸ್ತೆ ಅಭಿವೃದ್ಧಿಯನ್ನು ಇಡಿಯಾಗಿ ಕೈಗೆತ್ತಿಕೊಳ್ಳಬೇಕಿತ್ತು ಎಂಬುದು ಜನರ ಆಗ್ರಹ.
ಕೆಶಿಪ್ ಕೈಗೊಂಡಿರುವ ಗುಲ್ಬರ್ಗ- ಚೌಡಾಪುರ 33 ಕಿಮೀ ರಸ್ತೆ ಹೊರತುಪಡಿಸಿ ಉಳಿದ 70 ಕಿಮೀ ರಸ್ತೆ ಏಕಕಾಲಕ್ಕೇ ಅಭಿವೃದ್ಧಿಯಾಗಬೇಕಿತ್ತು. ಆದರೀಗ ಚೌಡಾಪುರ- ಕರ್ಜಗಿ 46 ಕಿಮೀ ಮಾತ್ರ ಕೈಗೆತ್ತಿಕೊಳ್ಳಲಾಗುತ್ತಿದೆ. ಅನುದಾನ ಹಂಚಿಕೆ ವಿಚಾರದಲ್ಲಿ ಭೂ ಸಾರಿಗೆ ಇಲಾಖೆಯಲ್ಲಿನ ಬೆಳವಣಿಗೆಗಳಿಂದಾಗಿ ಹೀಗಾಯ್ತು ಎಂದು ಹೇಳಲಾಗುತ್ತಿದೆ. ಆದರೂ ಅಂತಾರಾಜ್ಯ ಸಂಪರ್ಕ ರಸ್ತೆ ಯೋಜನೆ ಅರ್ಧಮರ್ಧ ರೂಪದಲ್ಲೇ ಜನರಿಗೆ ದೊರಕುತ್ತಿರುವುದು ವಾಸ್ತವ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement