ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಂಗನಕಲ್; ಅನ್ನಭಾಗ್ಯ ಯೋಜನೆಗೆ ಚಾಲನೆ

Rashmi Kasaragodu
Updated On : 31 Jul 2013, 11:24 am

ಚಿತ್ತಾಪುರ: ತಾಲೂಕಿನ ಇಂಗನಕಲ್ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಸರ್ಕಾರದ ಮಹತ್ವದ ಅನ್ನಭಾಗ್ಯ ಯೋಜನೆಗೆ ತೆಂಗಳಿ ಗ್ರಾಪಂ ಅಧ್ಯಕ್ಷ ಮಲ್ಲಪ್ಪ ಹೊಸ್ಮನಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಹೊಸ್ಮನಿ ಮಾತನಾಡಿ, ಬಡ ಕುಟುಂಬದವರಿಗೆ ಈ ಯೋಜನೆ ಬಹು ದೊಡ್ಡ ಕೊಡುಗೆಯಾಗಿ ಸರ್ಕಾರ ನೀಡಿದೆ. ಬಡವರು ಹಸಿವಿನಿಂದ ಬಳಲಬಾರದು ಎಂಬ ದೃಷ್ಟಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದೆ ಎಂದರು.
ಪ್ರತಿ ಕೆಜಿಗೆ 1 ನಂತೆ 30 ಕೆಜಿ ಅಕ್ಕಿ ವಿತರಿಸಲಾಗುತ್ತಿದೆ. ಸರಿಯಾದ ರೀತಿಯಲ್ಲಿ ಅಕ್ಕಿ ವಿತರಿಸಬೇಕೆಂದು ನ್ಯಾಯಬೆಲೆ ಅಂಗಡಿಯವರಿಗೆ ಕಿವಿಮಾತು ಹೇಳಿದ ಅವರು, ಇದರ ಸದುಪಯೋಗ ಬಿಪಿಎಲ್ ಪಡಿತರ ಚೀಟಿದಾರರು ಪಡೆದುಕೊಳ್ಳಬೇಕು ಎಂದರು.
ಗ್ರಾಪಂ ಸದಸ್ಯರಾದ ಪರಮೇಶ್ವರ ಬೆನಕಿನಪಳ್ಳಿ, ಶಿವರಾಯ ಕೋರಬಾ, ಸಿದ್ದಣ್ಣ ಮಂಗಲಗಿ, ಬಸವರಾಜ ಹಾಲಕಾಯಿ, ರುಕ್ಮೋದ್ದಿನ್ ದುಕಾನದಾರ, ಅನೀಲಕುಮಾರ್ ಇಂಗಿನ, ಮಲ್ಲಣ್ಣ ತೆಂಗಳಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement