ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕೊಳ್ಳೂರು ಸೇತುವೆ ಮುಳುಗಡೆ

Rashmi Kasaragodu
Updated On : 31 Jul 2013, 11:25 am

ಯಾದಗಿರಿ: ಕೃಷ್ಣಾ ನದಿ ಪ್ರವಾಹ ಮಂಗಳವಾರ ಮತ್ತಷ್ಟು ಹೆಚ್ಚಿದ್ದು, ಶಹಾಪುರ ತಾಲೂಕಿನ ಕೊಳ್ಳೂರು ಸೇತುವೆ ಮುಳುಗಡೆಯಾಗಿದೆ. ಇದರಿಂದ ರಾಯಚೂರು ಗುಲ್ಬರ್ಗ ಹೆದ್ದಾರಿ ಶಹಾಪುರ ನಡುವೆ ಸಂಪರ್ಕ ಕಡಿತಗೊಂಡಿದ್ದು, ನೂರಾರು ಎಕರೆ ಕೃಷಿ ಜಮೀನು ಜಲಾವೃತಗೊಂಡಿದೆ.
  ನಾರಾಯಣಪುರದ ಬಸವಸಾಗರ ಜಲಾಶಯದಿಂದ 2.69 ಲಕ್ಷ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದೆ. ಇದರಿಂದ ಒಂದೇ ವಾರದಲ್ಲಿ 2ನೇ ಬಾರಿಗೆ ಶಹಾಪುರ, ದೇವದುರ್ಗ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಿದಂತಾಗಿದೆ. ಜಲಾಶಯಕ್ಕೆ 2.62 ಲಕ್ಷ ಕ್ಯುಸೆಕ್ ನೀರು ಬರುತ್ತಿದೆ.
  ಕೊಳ್ಳೂರು ಸೇತುವೆ ಮುಳುಗಿದ್ದರಿಂದ ಮಂಗಳವಾರ ಬೆಳಗ್ಗೆಯಿಂದ ಸೇತುವೆ ಮೇಲೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಕೊಳ್ಳೂರು, ಯಕ್ಷಿಂತಿ, ಹಯ್ಯಾಳ, ಗೌಡೂರು ಸೇರಿದಂತೆ ಜಿಲ್ಲೆಯ ಹತ್ತಾರು ಗ್ರಾಮಗಳ ಹೊಲಗಳು ಜಲಾವೃತಗೊಂಡಿವೆ. ಹತ್ತಾರು ಕೃಷಿ ಪಂಪ್ಸೆಟ್ಗಳು ಮುಳುಗಿವೆ. ಇದರಿಂದ ರೈತರು ತೀವ್ರ ಹಾನಿ ಅನುಭವಿಸುವಂತಾಗಿದೆ. ಕಬ್ಬು, ಹತ್ತಿ, ಶೇಂಗಾ ಇನ್ನಿತರ ಬೆಳೆಗಳು ನೀರಿನಲ್ಲಿ ಮುಳುಗಿವೆ. ಇಡೀ ದಿನ ಸಾರಿಗೆ ಸ್ಥಗಿತಗೊಂಡಿದ್ದರಿಂದ ಸಾರಿಗೆ ಸಂಸ್ಥೆಗೂ ಲಕ್ಷಾಂತರ ರು. ನಷ್ಟವಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement