ಖಾಸಗಿ ಬಸ್ಗಳ ಅಕ್ರಮ ಸಂಚಾರಕ್ಕೆ ಆಕ್ರೋಶ
ಗುಲ್ಬರ್ಗ: ಖಾಸಗಿ ಬಸ್ಗಳ ಅಕ್ರಮ ಕಾರ್ಯಾಚರಣೆ ವಿರೋಧಿಸಿ ಸಾರಿಗೆ ನೌಕರರು ಕೆಎಸ್ಆರ್ಟಿಸಿ ಸ್ಟಾಪ್ ಮತ್ತು ವರ್ಕರ್ಸ್ ಯೂನಿಯನ್ ನೇತೃತ್ವದಲ್ಲಿ ಮಂಗಳವಾರ ಗುಲ್ಬರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಕೂಡಲೇ ಖಾಸಗಿ ಬಸ್ಗಳ ಅಕ್ರಮ ಕಾರ್ಯಾಚರಣೆಗೆ ಕಡಿವಾಣ ಹಾಕಬೇಕು. ಆರ್ಟಿಒ ಅಧಿಕಾರಿಗಳಿಂದ ಖಾಸಗಿ ಬಸ್ಗಳ ತಪಾಸಣೆ ನಡೆಸಬೇಕು. ಪರ್ಮಿಟ್ ಇಲ್ಲದ ಬಸ್, ಟೆಂಪೋ, ಟ್ರ್ಯಾಕ್, ಮ್ಯಾಕ್ಸಿಕ್ಯಾಬ್, ಟಂಟಂ ಮುಂತಾದ ವಾಹನಗಳನ್ನು ಸೀಜ್ ಮಾಡಬೇಕು ಎಂದು ಒತ್ತಾಯಿಸಿದರು.
ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಿಂದ 500 ಮೀಟರ್ ವ್ಯಾಪ್ತಿಯಲ್ಲಿ ಖಾಸಗಿ ಬಸ್ಗಳು ಪ್ರಯಾಣಿಕರನ್ನು ಸಾಗಿಸುತ್ತಿರುವುದನ್ನು ಕೂಡಲೇ ತಡೆಗಟ್ಟಬೇಕು ಎಂದು ಪ್ರಧಾನ ಕಾರ್ಯದರ್ಶಿ ಎಚ್.ವಿ. ಅನಂತಸುಬ್ಬರಾವ್ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿದ್ದಪ್ಪ ಪಾಲ್ಕಿ, ಫಕ್ರುದ್ದೀನ್, ಡಿ. ಎಚ್. ಮುಲ್ಲಾ, ನಾರಾಯಣರೆಡ್ಡಿ, ಸಿದ್ದಣ್ಣ ಕಣ್ಣೂರ್, ಅಬ್ದುಲ್ ಕಲಿಂ, ಶರಣಬಸಪ್ಪ ಗಣಜಲಖೇಡ, ನಂದಪ್ಪ ಜಮಾದಾರ ಸೇರಿದಂತೆ ನೂರಾರು ನೌಕರರು ಭಾಗವಹಿಸಿದ್ದರು.