ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮುಚ್ಚಿರುವ ಗ್ರಂಥಾಲಯ ತೆರೆಯುವಂತೆ ಕರವೇ ಗ್ರಾಮ ಘಟಕ ಆಗ್ರಹ

Rashmi Kasaragodu
Updated On : 31 Jul 2013, 11:26 am

ಅಫಜಲ್ಪುರ: ಅಪಜಲ್ಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿ ದಿನಾಲು ಗ್ರಂಥಾಲಯ ಮುಚ್ಚುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ಕಲಿತು ಕುಳಿತಿರುವ ನಿರುದ್ಯೋಗಿಗಳಿಗೆ ಇದರಿಂದ ತುಂಬಾ ತೊಂದರೆ ಆಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಿ ಪ್ರತಿ ದಿವಸ ಗ್ರಂಥಾಲಯ ತೆರೆಯುವಂತೆ ಮಾಡಬೇಕೆಂದು ಕರವೇ ಗ್ರಾಮ ಘಟಕದವರು ಒತ್ತಾಯಿಸಿದ್ದಾರೆ.
ಕರವೇ ಗ್ರಾಮ ಘಟಕದ ಅಧ್ಯಕ್ಷ ರಾಯಪ್ಪ ಪೂಜಾರಿ ಹಾಗೂ ಮುಖಂಡರಾದ ಅಂಬಣ್ಣ ಕವಟಗಿ, ಸತೀಶ ಸುತಾರ ಮಾತನಾಡಿ, ಗ್ರಂಥಾಲಯ ದಿನಾಲೂ ಮುಚ್ಚಿರುತ್ತದೆ ಇದರ ಬಗ್ಗೆ ಈಗಾಗಲೇ ಎರಡು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರು ಯಾವುದೇ ಪ್ರಯೋಜನ ಆಗಿಲ್ಲ. ಮುಂದಿನ ದಿನಗಳಲ್ಲಿ ತಾಲೂಕು ಕೇಂದ್ರದಲ್ಲಿ ಪ್ರತಿಭಟನೆ ಮಾಡಲಾಗುತ್ತದೆ.
ಮಾಶಾಳ ಗ್ರಾಮದಲ್ಲಿ ಸುಮಾರು 10 ಸಾವಿರ ಜನಸಂಖ್ಯೆಯಿದ್ದು, ಪ್ರಾಥಮಿಕ ಶಾಲೆ ಪ್ರೌಢಶಾಲೆ ಪದವಿಪೂರ್ವ ಕಾಲೇಜು ಶಿಕ್ಷಕರ ತರಬೇತಿ ಕೇಂದ್ರಗಳಿದ್ದು ಈ ಗ್ರಾಮ ತಾಲೂಕಿನ ಗಡಿ ಗ್ರಾಮವಾಗಿದ್ದು, ಗ್ರಾಮದಲ್ಲಿ ಸಾವಿರಾರು ಯುವಕರು ಶಿಕ್ಷಣ ಕಲಿತಿದ್ದು ಅವರಿಗೆ ಓದಲು ಗ್ರಂಥಾಲಯ ಅವಶ್ಯಕತೆಯಾಗಿದೆ. ಸರ್ಕಾರ ಗ್ರಂಥಾಲಯ ಮಂಜೂರು ಮಾಡಿದೆ. ಕಟ್ಟಡ ಇದ್ದು ಪುಸ್ತಕಗಳಿವೆ ಗ್ರಂಥಾಲಯ ಯಾವಾಗ ನೋಡಿದರು ಮುಚ್ಚಿರುವುದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಮುಖಂಡರು ಆರೋಪಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement