ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಂಘಟನೆಗಳಿಂದ ಮನವಿ

Rashmi Kasaragodu
Updated On : 31 Jul 2013, 11:24 am

ಗುಲ್ಬರ್ಗ: ಮಂಗಳವಾರ ಗುಲ್ಬರ್ಗಕ್ಕೆ ಆಗಮಿಸಿದ ಕೇಂದ್ರ ರೇಲ್ವೆ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆಗೆ ವಿವಿಧ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಿದರು.
ಜನವಾದಿ ಮಹಿಳಾ ಸಂಘಟನೆ: ದೇಶದ ಎಲ್ಲ ರೈಲುಗಳಿಗೆ ಹೆಚ್ಚುವರಿ ಮಹಿಳಾ ಬೋಗಿಗಳನ್ನು ಅಳವಡಿಸಬೇಕು ಮತ್ತು ಮಹಿಳಾ ಬೋಗಿಗಳನ್ನು ರೇಲ್ವೆ ಮಧ್ಯದಲ್ಲಿ ಜೋಡಿಸಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ರಾಜ್ಯ ಸಮಿತಿ, ಪ್ರಜ್ಞಾ ಕಾನೂನು ಸಲಹಾ ಸಮಿತಿ ಹಾಗೂ ಶಿಕ್ಷಕಿಯರ ವೇದಿಕೆಗಳ ಮುಖಂಡರು ಸಚಿವ ಖರ್ಗೆಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಮಹಿಳಾ ಬೋಗಿಗಳಿಗೆ ವಿಶೇಷ ಸ್ವಚ್ಛತಾ ಸೌಲಭ್ಯ ನೀಡಬೇಕು. ಸಾಕಷ್ಟು ನೀರು ಮತ್ತು ಬೆಳಕು ಅವಶ್ಯವಾಗಿ ಒದಗಿಸಬೇಕೆಂದು ನೀಲಾ .ಕೆ, ಡಾ. ಮೀನಾಕ್ಷಿ ಬಾಳಿ, ಸುಶೀಲ್ ಕಟ್ಟಿ, ಶಶಿಕಲಾ ಕಟ್ಕೆ, ಡಾ. ನಾಗರತ್ನ ದೇಶಮಾನ್ಯ, ಚಂದಮ್ಮ ಗೋಳಾ, ಡಾ. ಶಾಂತಾ ಮಠ, ಭಾಗ್ಯಲತಾ ಶಾಸ್ತ್ರೀ, ಡಾ. ಶಾಂತಾ ಅಷ್ಠಗಿ, ಅಮೀನಾ ಬೇಗಂ, ಹಣಮಂತ ಮಡಪೇ ಇತರರು ಮನವಿ ಮಾಡಿದರು.
ಜೈ ಕರ್ನಾಟಕ ರಕ್ಷಣಾ ವೇದಿಕೆ: ಸೊಲ್ಲಾಪುರ- ಯಶವಂತಪುರ ಎಕ್ಸ್ಪ್ರೆಸ್ ರೈಲಿಗೆ ಲುಂಬಣಿ ಅಥವಾ ಸಿದ್ದಾರ್ಥ ಎಕ್ಸ್ಪ್ರೆಸ್ ಎಂದು ನಾಮಕರಣ ಮಾಡಬೇಕೆಂದು ಜೈ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ ಮಂಜುನಾಥ ಹಾಗರಗಿ ಮತ್ತು ಜಿಲ್ಲಾ ಕಾರ್ಯದರ್ಶಿ ಸಚಿನ್ ಫರಹತಾಬಾದ್ ಒತ್ತಾಯಿಸಿದರು.
ಸೊಲ್ಲಾಪುರ- ಯಶವಂತಪುರ ಎಂದು ಕರೆಯಲ್ಪಡುವುದರಿಂದ ಸಾಮಾನ್ಯ ಜನರಿಗೆ ಅರಿಯದಂತಾಗಿದೆ. ಎಲ್ಲ ಎಕ್ಸ್ಪ್ರೆಸ್ ರೈಲುಗಳಿಗೆ ಹೆಸರು ಇದ್ದು ಇದಕ್ಕೆ ಮಾತ್ರ ಇಲ್ಲದಂತಾಗಿದೆ. ಕೂಡಲೇ ಇದರ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement