3ರಂದು ಪ್ರತಿಭಟನೆ
ಗುಲ್ಬರ್ಗ: ಡಾಂಬರೀಕರಣ ರಸ್ತೆ ನಿರ್ಮಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟಕ ಯುವಶಕ್ತಿ ಸೈನ್ಯ ಆ.3ರಂದು ಬೆಳಗ್ಗೆ 11 ಗಂಟೆಗೆ ಸಿರಗಾಪುರ ಕ್ರಾಸ್ ಹತ್ತಿರ ಪ್ರತಿಭಟನೆ ಮತ್ತು ಹೆದ್ದಾರಿ ತಡೆ ಚಳವಳಿ ಹಮ್ಮಿಕೊಂಡಿದೆ.
ಸಿರಗಾಪುರ ಕ್ರಾಸ್ನಿಂದ ಸಿರಡೋಣ, ಭೂಸಣಗಿ, ಕಣ್ಣೂರ್, ಬಬಲಾದ ಹಾಗೂ ಶ್ರೀಚಂದವರೆಗೆ 14 ಕಿ.ಮೀ. ಒಳ್ಳೆಯ ಡಾಂಬರೀಕರಣ ರಸ್ತೆ ನಿರ್ಮಿಸಬೇಕು. ಬಬಲಾದ(ಐಕೆ) ಗ್ರಾಮದಲ್ಲಿ ಸುಮಾರು ವರ್ಷಗಳಿಂದ ನೀರಿನ ಸಮಸ್ಯೆ ಇದ್ದು, ಈ ಗ್ರಾಮಕ್ಕೆ ಶಾಶ್ವತವಾದ ಪರಿಹಾರ ಬೇಕು. ಕುರಿಕೋಟಾ ಹೊಸ ಸೇತುವೆ ನಿರ್ಮಾಣದ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಲಾಗುವುದು ಎಂದು ರಾಜ್ಯಾಧ್ಯಕ್ಷ ಲಿಂಗರಾಜ ಗುಂಡುರಕರ್ ತಿಳಿಸಿದ್ದಾರೆ.