ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

4ರಿಂದ ಪರಂಪರಾ ಪಾದಯಾತ್ರೆ

Lingaraj Badiger
Updated On : 1 Aug 2013, 11:10 am

ಯಾದಗಿರಿ: ಸಿದ್ಧಿಪುರುಷ ವಿಶ್ವರಾಧ್ಯಾ ಮಠದ ಪರಂಪರಾ ಪಾದಯಾತ್ರೆ ಆ.4ರಿಂದ ಪ್ರಾರಂಭವಾಗಲಿದೆ ಎಂದು ತಾಲೂಕಿನ ಅಬ್ಬೆತುಮಕೂರು ಮಠದ ಪೀಠಾಧಿಪತಿ ಡಾ. ಗಂಗಾಧರ ಸ್ವಾಮೀಜಿ ತಿಳಿಸಿದ್ದಾರೆ.
  ಶ್ರೀಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪರಂಪರಾ ಪಾದಯಾತ್ರೆ  ವಿವರಗಳನ್ನು ನೀಡಿದರು. ವಿಶ್ವರಾಥ್ಯಾರ ಜನ್ಮಭೂಮಿ ಗಂವ್ಹಾರದಲ್ಲಿ ಆ. 4ರಂದು ಬೆಳಗ್ಗೆ ಬನ್ನಿ ಬಸವೇಶ್ವರ ಗದ್ದುಗೆಗೆ ಗೋರಟಾ ರುದ್ರ ಸಂಗೀತದವರಿಂದ ವಿಶೇಷ ಪೂಜಾ ವಿಧಿವಿಧಾನಗಳು ಜರುಗುತ್ತವೆ. ಅಲ್ಲಿಂದ ಪಾದಯಾತ್ರೆ ಪ್ರಾರಂಭವಾಗಿ ಗಂವ್ಹಾರದ ಸೀಮಾಂತರದಲ್ಲಿ ಭಕ್ತ ಚನ್ನಪ್ಪಗೌಡ ಬಿರಾದಾರ ಮತ್ತು ಬಸವಂತರಾಯ ಗೌಡ ಇವರ ಭಕ್ತಿಯನ್ನು ಸ್ವೀಕರಿಸಲಾಗುವುದು.
  ನಂತರ ಅಣಬಿಯಲ್ಲಿ ಪ್ರಸಾದ ಸೇವೆ, ಸಿರವಾಳ ಮೂಲಕ ಸಾಗಿ ಸೋಮೆಶ್ವರ ಸನ್ನಿಧಾನದಲ್ಲಿ ಭೀಮಾ ನದಿ ದಾಟಿ ಸನ್ನತಿಯ ಚಂದ್ರಕಲಾ ಪರಮೇಶ್ವರಿ ದೇವಸ್ಥಾನದಲ್ಲಿ ವಾಸ್ತವ್ಯ ಮಾಡಲಾಗುತ್ತದೆ. ಅಲ್ಲಿ ಪಾದಯಾತ್ರೆಯ ಭಕ್ತರಿಗೆ ಸನ್ನತಿ ಭಕ್ತರಿಂದ ಪ್ರಸಾದ ಸೇವೆ ನಡೆಯುತ್ತದೆ.  ಆ.5ರಂದು ಪಾದಯಾತ್ರೆ ಕನಗಾನ ಹಳ್ಳಿ, ಉಳುವಂಡಗೇರಾ, ಬನ್ನೆಟ್ಟಿ, ತಳಕ, ಹೆಡಗಿಮದ್ರಾ ಶಾಂತ ಶೀವಯೋಗಿ ಕ್ಷೇತ್ರದಲ್ಲಿ ವಾಸ್ತವ್ಯ ಮಾಡಲಾಗುತ್ತದೆ. ಆ.6ರಂದು ಬೆಳಗ್ಗೆ ಗೋಗಿ, ದೇವಣಗಾಂವ, ಜೇವರ್ಗಿ ಮೂಲಕ ಮಧ್ಯಾಹ್ನದ ಹೊತ್ತಿಗೆ ಠಾಣಗುಂದಿ ಗ್ರಾಮವನ್ನು ತಲುಪಲಿದೆ. ಆ ಗ್ರಾಮದ ಭಕ್ತರಿಂದ ಪ್ರಸಾದ ಸ್ವೀಕರಿಸಿ ಹೊರಟು ಸಂಜೆ ಅಬ್ಬೆತುಮಕೂರು ಪಾದಗಟ್ಟೆ ತಲುಪುವುದು.
ಅಬ್ಬೆತುಮಕೂರಲ್ಲಿ ಧಾರ್ಮಿಕ ಸಭೆ: ಅಲ್ಲಿಂದ ಮಂಗಲ ವ್ಯಾದಗೊಂದಿಗೆ ಪಾದಯಾತ್ರೆ ಮೆರವಣಿಗೆಯ ಮೂಲಕ ಶ್ರೀಮಠವನ್ನು ತಲುಪುವುದು. ನಂತರ ಧಾರ್ಮಿಕ ಸಭೆ ಜರುವುದು. ನಂತರ ಮಠದಲ್ಲಿ ಎಲ್ಲಾ ಭಕ್ತರಿಗೆ ಪ್ರಸಾದ ವ್ಯವಸ್ಥೆ ನಡೆಯಲಿದೆ ಎಂದು ಗಂಗಾಧರ ಸ್ವಾಮೀಜಿ ತಿಳಿಸಿದರು. ಡಾ. ಸುಭಾಶ್ವಂದ್ರ ಕೌಲಗಿ ಮತ್ತು ಎಸ್.ಎನ್. ಮಿಂಚನಾಳ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement