ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಆನಂದ ಸಾಹು ತತ್ವಾದರ್ಶ ಅಳವಡಿಸಿಕೊಳ್ಳಿ

Lingaraj Badiger
Updated On : 1 Aug 2013, 11:10 am

ಕನ್ನಡಪ್ರಭ ವಾರ್ತೆ  ಸುರಪುರ  ಜು.31
ತಾಲೂಕಿನ ಕುರುಬ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ಆನಂದ ಸಾಹುಕಾರ ಕೊಲೆಗೀಡಾದದ್ದು ಒಂದು ಕೆಟ್ಟ ಗಳಿಗೆ.
 ಆದರೆ ಸಮಾಜಕ್ಕಾಗಿ ಸಲ್ಲಿಸಿದ ಅವರ ಸೇವೆ ಅವೀಸ್ಮರಣೀಯ. ಅವರ ಪರಿವಾರ ಮತ್ತು ಹಾಲುಮತ ಸಮಾಜ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆದು ಆವರ ಆತ್ಮಕ್ಕೆ ಶಾಂತಿ ನೀಡಬೇಕೆಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಗೌಡ ಹುಲಕಲ್ ಹೇಳಿದರು.
ತಾಲೂಕಿನ ಆಲ್ದಾಳ ಗ್ರಾಮದಲ್ಲಿ ಬುಧವಾರ ಹುದ್ದಾರ ಪರಿವಾರ ಏರ್ಪಡಿಸಿದ್ದ ಆನಂದ ಸಾಹು ಅವರ 3ನೇ ಪುಣ್ಯಸ್ಮರಣೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಆನಂದನ ಕನಸು ಸಾಕಾರಗೊಳಿಸಿ: ದೇಶದಲ್ಲಿ ಸಮಾಜ ಸುಧಾರಣೆಗೆ ಅಹರ್ನಿಶಿ ಶ್ರಮಿಸಿದ ಮಹನೀಯರೆಲ್ಲ ಇಂತಹ ದುರ್ಘಟನೆಯಲ್ಲಿ ಮಡಿದುಹೋಗಿದ್ದಾರೆ.
  ದುಷ್ಟಶಕ್ತಿಗಳಿಗೆ ಅವರ ದೇಹ ಬಲಿಯಾಯಿತು ವಿನಃ ಅವರ ತತ್ವದರ್ಶಗಳು ನಾಶವಾಗಲಿಲ್ಲ. ಹೀಗಾಗಿ ಅವರು ಇಂದಿಗೂ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಅದರಂತೆ ಆನಂದಸಾಹು ನಮ್ಮ ಕಣ್ಣಿಂದ ಮರೆಯಾಗಿದ್ದಾನೆ. ಆದರೆ ಅವರ ಇರುವಿಕೆ ಮಾತ್ರ ಸಮಾಜದ ಮಧ್ಯೆ ಜೀವಂತವಾಗಿದೆ. ನಾವೆಲ್ಲ ಸೇರಿ ಅವರ ಕನಸುಗಳನ್ನು ಸಾಕಾರಗೊಳಿಸಿದಾಗ ಈ ಸ್ಮರಣೋತ್ಸವಕ್ಕೆ ಅರ್ಥ ಸಿಗುತ್ತದೆ ಎಂದರು.
ಆತನ ಆತ್ಮ ನಮ್ಮೊಂದಿಗಿದೆ: ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಆನಂದ ಸಾಹುಕಾರ ದಿಟ್ಟ ನುಡಿಯ ಯುವಕನಾಗಿದ್ದ. ಸಮಾಜದ ಸಂಘಟನೆ ಹಾಗೂ ಏಳ್ಗೆಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಚಿಕ್ಕ ವಯಸ್ಸಲ್ಲೇ ಅವರು ಸಮಾಜದಲ್ಲಿ ಪ್ರಭಾವಿ ನಾಯಕನಾಗಿ ಹೂರಹೊಮ್ಮಿದ್ದರು.
ಇಂದು ಸಾಹುಕಾರ ನಮ್ಮ ಮಧ್ಯೆ ಇರದಿದ್ದರೂ ಅವರ ಆತ್ಮ ನಮ್ಮೊಂದಿಗಿದೆ. ನನ್ನ ಅಧಿಕಾರವಧಿಯಲ್ಲಿ ಯಾವುದೇ ಸಮುದಾಯಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಪ್ರಮಾಣ ಮಾಡಿದರು.
ವಕೀಲರಾದ ವೆಂಕಾರಡ್ಡಿ ಬೋನಾಳ, ನಿಂಗಣ್ಣ ಚಿಂಚೋಡಿ ಮಾತನಾಡಿದರು. ರಾಯಚೂರು ಕುರುಬ ಸಮಾಜದ ಮುಖಂಡ ಹಣ್ಮಂತಪ್ಪ ತೊಗರಿ, ಕರ್ನಾಟಕ ಪ್ರದೇಶ ಕುರುಬ ಸಮಾಜದ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಗಿರೆಪ್ಪಗೌಡ ಬಾಣತಿಹಾಳ, ಬೀಮರಾಯ ಮಾಸ್ಟರ್ ವಾಗಣಗೇರಿ, ವಿಠ್ಠಲ್ ಯಾದವ್, ಸುರೇಶ ತಂಬಾಕೆ, ಯಮನಪ್ಪ ಬಪ್ಪರಗಿ, ವೆಂಕೋಬ ಮಂಗಳೂರ, ಮಲ್ಲಣ್ಣ ಮಿಲ್ಟ್ರಿ, ಮಲ್ಲಯ್ಯ ಕಮತಗಿ, ಶ್ರೀನಿವಾಸ ರಫೂಗಾರ, ದತಾತ್ರೇಯ ಗುತ್ತೇದಾರ, ಅಬ್ದುಲ್  ಗಫರ ನಗನೂರಿ, ತಿಪ್ಪರಾಜಗೌಡ ಬಾಚಿಮಟ್ಟಿ, ಮಾನಪ್ಪಗೌಡ ಹೆಬ್ಬಾಳ, ಸಣ್ಣ ಮಾನಯ್ಯ ಬಂಡೋಳಿ, ಗುಂಡಪ್ಪ ಸೋಲ್ಲಾಪೂರ ಇತರರು ಇದ್ದರು.ಕಾರ್ಯಕ್ರಮಕ್ಕೂ ಮೊದಲು ಆನಂದ ಸಾಹುಕಾರರ ಸಮಾದಿಗೆ ಶಾಶಕ ರಾಜಾ ವೆಂಕಟಪ್ಪ ನಾಯಕ ಪುಷ್ಪಗುಚ್ಛ ಇಟ್ಟರು. ಮಾನಪ್ಪ ಸಾಹು ಪ್ರಾಸ್ತಾವಿಕ ಮಾತನಾಡಿದರು.  ರವಿಚಂದ್ರ ಸಾಹು ಸ್ವಾಗತಿಸಿದರು. ಸೂಲಪ್ಪ ಕಮತಗಿ ನಿರೂಪಿಸಿದರು. ಮಂಜುನಾಥ ಹುದ್ದಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement