ದಶಕ ಕಳೆದ ಕಾಮಗಾರಿಗೆಮುಕ್ತಿ ಕಲ್ಪಿಸಿ: ಇಬ್ರಾಹಿಂ
ಜೇವರ್ಗಿ: ಪಟ್ಟಣದ ನಾಗರಿಕರ ಅನುಕೂಲಕ್ಕಾಗಿ ನಿರ್ಮಿಸಲಾಗುತ್ತಿರುವ ಸುಮಾರು 4.5 ಕೋಟಿ ಅಂದಾಜು ವೆಚ್ಚದ ಒಳಚರಂಡಿ ಯೋಜನೆ ಕಾಮಗಾರಿ ದಶಕ ಕಳೆದರೂನಾಗರಿಕರ ಉಪಯೋಗಕ್ಕೆ ಬಾರದಂತಾಗಿದೆ ಎಂದು ಪಪಂ ಮಾಜಿ ಸದಸ್ಯ ಇಬ್ರಾಹಿಂ ಪಟೇಲ್ ಆರೋಪಿಸಿದ್ದಾರೆ.
ಕಳೆದ ದಶಕಗಳ ಹಿಂದೆ ಆಗ ಲೋಕೋಪಯೋಗಿ ಮಂತ್ರಿ ಎನ್.ಧರ್ಮಸಿಂಗ್ ಅವರು ಈ ಯೋಜನೆಗೆ ಹಣ ಒದಗಿಸಿ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಅಧೀನದ ಇಲಾಖೆಗೆ ಕಾಮಗಾರಿ ನಿರ್ವಹಿಸಿದ್ದರು. ಯೋಜನೆಯನ್ನು ಹಳ್ಳ ಹಿಡಿಯದಂತೆ ಸ್ಥಳೀಯ ಪಪಂ ಇಲಾಖೆ ಒಳಚರಂಡಿಯನ್ನು ತಮ್ಮ ಇಲಾಖೆ ಸುಪರ್ದಿಗೆ ಪಡೆದು ಕಾಮಗಾರಿಗೆ ಮುಕ್ತಿ ಕಲ್ಪಿಸಿ ನಾಗರಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಇಬ್ರಾಹಿಂ ಪಟೇಲ್ ಒತ್ತಾಯಿಸಿದ್ದಾರೆ.