ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪ್ರಮುಖ ರೈಲುಗಳ ನಿಲುಗಡೆಗಾಗಿ ಸಚಿವರಿಗೆ ಮನವಿ

Lingaraj Badiger
Updated On : 1 Aug 2013, 11:09 am

ಯಾದಗಿರಿ: ಜಿಲ್ಲಾ ಕೇಂದ್ರವಾಗಿರುವ ಯಾದಗಿರಿಯಲ್ಲಿ ಪ್ರಮುಖ ರೈಲುಗಳ ನಿಲುಗಡೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಇಲ್ಲಿನ ಗಂಜ್ ವರ್ತಕರ ಸಂಘದ ಪದಾಧಿಕಾರಿಗಳ ನಿಯೋಗ ಗುಲ್ಬರ್ಗದಲ್ಲಿ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು.
ಜಿಲ್ಲಾ ಕೇಂದ್ರವಾದ ನಂತರ ಯಾದಗಿರಿಯಿಂದ ತೆರಳುವ ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚಾಗಿದೆ. ರೇಲ್ವೆ ನಿಲ್ದಾಣ ಗುಂತಕಲ್ ವಿಭಾಗದಲ್ಲಿಯೇ ಅತಿ ಹೆಚ್ಚು ಆದಾಯ ತರುವ ನಿಲ್ದಾಣವಾಗಿದೆ. ರೇಲ್ವೆ ಇಲಾಖೆಗೆ ಹೆಚ್ಚಿನ ಆದಾಯ ಕೂಡ ಬರುತ್ತಿದೆ. ಆದರೆ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದರೂ, ಪ್ರಮುಖ ರೈಲುಗಳು ಇಲ್ಲಿ ನಿಲ್ಲುತ್ತಿಲ್ಲ. ಈ ಕುರಿತು ಸಂಘ ಹಾಗೂ ವಿವಿಧ ಸಂಘಟನೆಗಳು ಮೊದಲಿನಿಂದಲು ಹೋರಾಟ ಮಾಡಿದರೂ  ಪ್ರಯೋಜನವಾಗಿಲ್ಲ ಎಂದು ಸಚಿವರಿಗೆ ಮನವರಿಕೆ ಮಾಡಿದರು.
ನಿಲುಗಡೆ ಬೇಕು: ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಕರ್ನಾಟಕ ಎಕ್ಸ್‌ಪ್ರೆಸ್, ರಾಜಧಾನಿ ಎಕ್ಸ್‌ಪ್ರೆಸ್, ಬೆಂಗಳೂರು- ಗೊರಕ್‌ಪುರ ಎಕ್ಸ್‌ಪ್ರೆಸ್, ಜಯಂತಿ ಜನತಾ ಎಕ್ಸ್‌ಪ್ರೆಸ್, ರಾಜಕೋಟ್ ಎಕ್ಸ್‌ಪ್ರೆಸ್, ಬೆಂಗಳೂರು-ಅಹ್ಮದಾಬಾದ್ ಎಕ್ಸ್‌ಪ್ರೆಸ್, ಮದುರೈ ಎಕ್ಸ್‌ಪ್ರೆಸ್, ಸಿಕಂದ್ರಾಬಾದ್-ತಿರುಪತಿ ಎಕ್ಸ್‌ಪ್ರೆಸ್,  ಚೆನ್ನೈ-ಶಿರಡಿ ಎಕ್ಸ್‌ಪ್ರೆಸ್ ಹಾಗೂ ದ್ವಾರಕ ಎಕ್ಸ್‌ಪ್ರೆಸ್ ಇನ್ನಿತರ ರೈಲು ನಿಲುಗಡೆಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಸಚಿವ ಖರ್ಗೆ ಈ ಭಾಗದ ಅಭಿವೃದ್ಧಿ ಬಗ್ಗೆ ನನಗೆ ಅಪಾರ ಕಾಳಜಿ ಇದೆ.ಅಧಿಕಾರಿಗಳೊಂದಿಗೆ ಚರ್ಚಿಸಿ, ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಿಯೋಗದಲ್ಲಿ ಸುಮರ್‌ಮಲ್ ಜೈನ್, ವಿಶ್ವನಾಥ ರೆಡ್ಡಿ ಗೌಡರೆಡ್ಡಿ, ಸಿದ್ರಾಮರೆಡ್ಡಿ ಬಲಕಲ್, ಕಾಂತಿಲಾಲ ದೋಖಾ, ವಿನೋದ ಭಂಡಾರಿ, ಪ್ರಕಾಶಗೌಡ ಕೊಲ್ಲೂರ್, ಜಗನ್ನಾಥ ರೆಡ್ಡಿ ಸಂಬರ, ನೇಮಿಚಂದ ಜೈನ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement