ಮನೆಗೊಬ್ಬ ಕ್ರೀಡಾಪಟು ಇರಲಿ: ಬಿಇಒ ಕೆಂಪರಂಗಯ್ಯ
ಹುಣಸಗಿ: ಹೆಣ್ಣಿರಲಿ, ಗಂಡಿರಲಿ, ಮನೆಗೊಬ್ಬ ಕ್ರೀಡಾಪಟು ಇರಲಿ. ಕ್ರೀಡೆ ಇಲ್ಲದ ಜೀವನ ಕೀಡೆಗೆ ಸಮ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ವಿ.ಕೆಂಪರಂಗಯ್ಯ ಅಭಿಪ್ರಾಯಪಟ್ಟರು.
ಇಲ್ಲಿಗೆ ಸಮೀಪದ ದೇವತಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಹುಣಸಗಿ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿದರು. ಕ್ರೀಡೆಗಳು ನಮ್ಮ ಸರ್ವಾಂಗೀಣ ಪ್ರಗತಿಗೆ ಉಪಕಾರಿಯಾಗಿವೆ. ಇತ್ತೀಚಿನ ದಿನಗಳಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಗೆ ಅಂಟಿಕೊಳ್ಳುತ್ತಿರುವ ನಮ್ಮ ಯುವ ಜನಾಂಗದಿಂದಾಗಿ ಆಚಾರ, ವಿಚಾರ, ಕಲೆ, ಸಾಹಿತ್ಯ ಅಷ್ಟೆ ಅಲ್ಲದೇ ಕ್ರೀಡಾರಂಗದಲ್ಲೂ ನಮ್ಮ ದೇಶೀಯತೆ ಕಣ್ಮರೆಯಾಗುತ್ತಿರುವುದು ವಿಷಾದನಿಯ. ಆಟಗಳಲ್ಲಿ ಸೋಲು, ಗೆಲವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ. ನಾವು ಪಂದ್ಯಾವಳಿಗಳಲ್ಲಿ ಸೋತರೆ ದುಃಖಿಸುವ ಚಿಂತೆಯಿಲ್ಲ. ಇಂದಿನ ಸೋಲೇ ಮುಂದಿನ ಗೆಲವು ಎಂದು ಹೇಳಿದರು.
ಆತ್ಮವಿಶ್ವಾಸ: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿವೈಪಿಇ ಶಾಂತಗೌಡ ಪಾಟೀಲ್, ಕ್ರೀಡಾ ಚಟುವಟಿಕೆಗಳ ಮೂಲಕ ಬದುಕು ಕಟ್ಟುವ ಕಾಯಕವಾಗಬೇಕಿದೆ. ಆತ್ಮವಿಶ್ವಾಸದ ಬದುಕಿಗೆ ಮತ್ತು ಜೀವನ ಪ್ರೀತಿಗೆ ಕ್ರೀಡೆಯು ಸಹಕಾರಿಯಾಗುತ್ತದೆ. ಬಿಡುವಿಲ್ಲದ ಓದಿನ ಜೊತೆಗೆ ಕ್ರೀಡೆಯನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು. ಜಿಪಂ ಮಾಜಿ ಅಧ್ಯಕ್ಷ ಯಲ್ಲಪ್ಪ ಕುರಕುಂದಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿ.ಆರ್. ಪೊಲೀಸ್ ಪಾಟೀಲ್ ಪಥಸಂಚಲನದ ನೇತೃತ್ವ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ಶಂಕಣ್ಣ ತೋಟದ್, ಗ್ರಾಪಂ ಅಧ್ಯಕ್ಷ ವೆಂಕಟೇಶ ಕರಡಿಗುಡ್ಡ, ಗ್ರಾಪಂ ಸದಸ್ಯ ಭೀಮರಾಯ, ಎಸ್.ಬಿ.ಹೇರುಂಡಿ, ದುಂಡಪ್ಪ ಕೋಲಕಾರ್, ಮುತ್ತುರಾಜ ನಿರೂಪಿಸಿದರು. ಮುತ್ತು ಪೂಜಾರಿ ವಂದಿಸಿದರು. ಚಿದಾನಂದ ಸ್ವಾಗತಿಸಿದರು.
ಕ್ರೀಡಾಸಕ್ತಿ ಬೆಳೆಸಿಕೊಳ್ಳಿ: ವೇಣುಮಾಧವ
ಸುರಪುರ: ಮಕ್ಕಳು ಪಠ್ಯದೊಂದಿಗೆ ಕ್ರೀಡಾಸಕ್ತಿ ಬೆಳಸಿಕೊಳ್ಳಬೇಕು. ಪಠ್ಯದ ಜತೆಗೆ ಕ್ರೀಡೆಯೂ ವಿದ್ಯಾರ್ಥಿ ಜೀವನಕ್ಕೆ ಸಹಕಾರಿಯಾಗಿದೆ ಎಂದು ಪುರಸಭೆ ಸದಸ್ಯ ವೇಣುಮಾಧವನಾಯಕ ಕರೆ ನೀಡಿದರು.
ಇಲ್ಲಿಯ ಕಬಾಡಗೇರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಸುರಪುರ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಓದುವುದರ ಜೊತೆಗೆ ವಿದ್ಯಾರ್ಥಿಗಳು ಕ್ರೀಡಾಸಕ್ತಿ ಅಳವಡಿಸಿಕೊಂಡರೆ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಸಲಹೆ ನೀಡಿದರು.
ಎಸ್‌ಡಿಎಂಸಿ ಅಧ್ಯಕ್ಷ ಅಮೃತಲಾಲ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯರಾದ ದೇವಿಂದ್ರಪ್ಪ ಕಳ್ಳಿಮನಿ ಕ್ರೀಡಾ ಜ್ಯೋತಿ ಸ್ವೀಕರಿಸಿದರು.
ಎಕ್ಬಾಲ್ ವರ್ತಿ, ದೈಹಿಕ ಶಿಕ್ಷಣಾಧಿಕಾರಿ ಬಿ.ಆರ್. ಪೊಲೀಸ್ ಪಾಟೀಲ್, ಶಾಲೆಯ ಮುಖ್ಯಗುರು ದೇವಿಂದ್ರಪ್ಪ ಪೂಜಾರಿ, ಪ್ರಮುಖರಾದ ಸುಭಾಶ್ಚಂದ್ರನಾಯಕ, ಸಿದ್ಧಲಿಂಗಯ್ಯಸ್ವಾಮಿ ಕಡ್ಲಪ್ಪಮಠ, ಬಸವರಾಜ ಜಾಲಹಳ್ಳಿ, ಶರಣಪ್ಪ ಹಳ್ಳದ, ತಿರುಪತಿ ಕಲ್ಲೋಡಿ, ಗುಂಡಪ್ಪ ಹಳಿಸಗರ, ವೀರಣ ಹಳಿಸಗರ, ಸ್ಟೀಫನ್ ದೊಡ್ಡಮನಿ, ಅಬ್ದುಲ್ ರಹಮಾನ್, ರಾಜಗೋಪಾಲ ಬನ್ನಿಗಿಡ, ಶರಣಪ್ಪ ಕಳ್ಳಿಮನಿ, ಮಂಜುನಾಥ ನಾಯಕ, ನರೇಂದ್ರನಾಯಕ ಮತ್ತಿತರರು ಇದ್ದರು.