ಹೂಗಾರ ಗಲ್ಲಿ ಅಂಗನವಾಡಿ ಕೇಂದ್ರಕ್ಕೆ ಕೊಳಚೆ ಅಡ್ಡಿ
ಅಫಜಲ್ಪುರ: ಅಫಜಲ್ಪುರ ಪಟ್ಟಣದ ಹೂಗಾರ ಗಲ್ಲಿಯಲ್ಲಿರುವ ಅಂಗನವಾಡಿ ಕೇಂದ್ರದ ಸುತ್ತ ಮುತ್ತ ಕೊಳಚೆ ನೀರು, ಹುಲ್ಲು ಕಸ,ಕಡ್ಡಿ ತುಂಬಿಕೊಂಡಿರುವುದರಿಂದ ಕೇಂದ್ರಕ್ಕೆ ಮಕ್ಕಳು ಹೋಗಲು ತೊಂದರೆಯಾಗಿದೆ.
ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಬೇಕಾದೆರೆ ಈ ಅಂಗನವಾಡಿ ಕೇಂದ್ರ ಮಕಳಿಲ್ಲದೆ ಬಿಕೋ ಎನ್ನುತ್ತಿದೆ. ಕಾರಣ ಈ ಅಂಗನವಾಡಿ ಕೇಂದ್ರದ ಸುತ್ತಲಿನ ಪ್ರದೇಶ ಕೊಳಚೆಯಿಂದ ಕೂಡಿರುವುದರಿಂದ ಮಕ್ಕಳು ಅಂಗನವಾಡಿಗೆ ಬರುತ್ತಿಲ್ಲ. ಈ ಅಂಗನವಾಡಿ ಕೇಂದ್ರದಲ್ಲಿ 50 ಮಕ್ಕಳು ದಾಖಲಾಗಿದ್ದರೂ ಯಾವುದೇ ಮಕ್ಕಳು ಅಂಗನವಾಡಿಯುತ್ತ ಸುಳಿಯುತ್ತಿಲ್ಲ. ಮಲಿನವಾದ ಜಾಗದಲ್ಲಿ ತಮ್ಮ ಮಕ್ಕಳು ಕುಳಿತು ಕಲಿಯುವುದು ಸಾಧ್ಯವಿಲ್ಲವೆಂದು ಪೋಷಕರು ಈ ಕೇಂದ್ರಕ್ಕೆ ತಮ್ಮ ಮಕ್ಕಳನನ್ನು ಕಳುಹಿಸುತ್ತಿಲ್ಲ. ಮಕ್ಕಳಿಗೆ ಕಲಿಕೆ ಪೌಷ್ಟಿಕವಾದ ಆಹಾರ ನೀಡಬೇಕಾದ ಈ ಕೇಂದ್ರ ಮಕ್ಕಳ ಪಾಲಿಗೆ ರೋಗ ತರುವ ತಾಣವಾಗಿದೆ ಎನ್ನುತ್ತಾರೆ ಪಾಲಕರು.
--