ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ದಲಿತರ ಮೇಲೆ ದೌರ್ಜನ್ಯ ತಡೆಗೆ ಕ್ರಮ: ಡಿಸಿ ಪ್ರಸನ್ನಕುಮಾರ್

Lingaraj Badiger
Updated On : 3 Jun 2013, 11:14 am

ಕನ್ನಡಪ್ರಭ ವಾರ್ತೆ, ಆಳಂದ, ಜೂ.2
ತಾಲೂಕಿನಲ್ಲಿ ಶೀಘ್ರವೇ ಲೋಕ ಅದಾಲತ ಮೂಲಕ ದಲಿತ ಸಮುದಾದ ಮೇಲೆ ದೌರ್ಜನ್ಯ ತಡೆಗೆ ಮುಂಜಾಗೃತ ಕ್ರಮಕೈಗೊಂಡು ಅಗತ್ಯ ನೆರವು ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ಭರವಸೆ ನೀಡಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ದಲಿತ ಮುಖಂಡರಿಗೆ ಕರೆದ ಸಭೆಯಲ್ಲಿ ಮಾತನಾಡಿ, ಕಹಿ ಘಟನೆ ಸಂಭವಿಸಿದ ಕೋತನಹಿಪ್ಪರಗಾ, ಬಂಗರಗಾ ಗ್ರಾಮಕ್ಕೆ ತಹಸೀಲ್ದಾರ್, ಪೊಲೀಸ್ ಅಧಿಕಾರಿಗಳು ತಿಂಗಳಿಗೆ ಎರಡೂ ಬಾರಿ ಭೇಟಿ ನೀಡಿ ಸೌಹಾರ್ದಯುತ ವಾತಾವರಣ ಕಲ್ಪಿಸಬೇಕೆಂದು ತಾಕೀತು ಮಾಡಿದರು.
ಸಮಾಜ ಕಲ್ಯಾಣಾಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿಯ ದಲಿತರ ಬೇಡಿಕೆಯ ಪಟ್ಟಿಯನ್ನು ಸಲ್ಲಿಸಬೇಕು. ಶೀಘ್ರವೇ ಲೋಕ ಅದಾಲತ ಕೈಕೊಂಡು ವಿವಿಧ ರೀತಿ ಮಾಸಾಶನ, ವಿದ್ಯುತ್, ನೀರು, ಮನೆ ಪ್ರಮುಖ ಮೂಲಸೌಲಭ್ಯಗಳ ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾದೇವ ಬಿ. ಧನ್ನಿ ಅವರು ದೌರ್ಜನ್ಯ ಪೀಡಿತ ದಲಿತ ಓಣಿಗಳಿಗೆ ಸರ್ಕಾರ ವಿಶೇಷ ಪ್ಯಾಕೇಜ್ ನೀಡಿ ಪುನರ್ರವಸತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಮುಖಂಡ ದಯಾನಂದ ಶೇರಿಕಾರಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸ್ವಾರ್ಥ ರಾಜಕೀಯವಾಗಿ ದಲಿತರಿಗೆ ಬಳಿಸಿಕೊಂಡು ಜಾತಿ ನಿಂಧನೆ ಹೊಡೆದಾಟಕ್ಕೆ ಕಾರಣವಾಗುತ್ತಿದೆ. ಇದರಿಂದ ಜಾಗೃತವಾಗಬೇಕು. ನೊಂದವರಿಗೆ ಜಿಲ್ಲಾಡಳಿತ ಪರಿಹಾರ ಒದಗಿಸಬೇಕು ಎಂದರು.
ಮಲ್ಲಿಕಾರ್ಜುನ ಬೋಳಣಿ, ಪ್ರಕಾಶ ಮೂಲಭಾರತಿ, ತುಕಾರಾಮ ಹೆಬಳಿ, ದಿಲೀಪ ಕ್ಷಿರಸಾಗರ, ಅಂಬಾರಾಯ ಚಲಗೇರಾ ಇತರರು ಮಾತನಾಡಿ, ದಲಿತರಿಗೆ ಎದುರಾಗುತ್ತಿರುವ ಸಮಸ್ಯೆ ಹಾಗೂ ಬೇಡಿಕೆ ಈಡೇರಿಸುವಂತೆ ಜಿಲ್ಲಾಧಿಕಾರಿ ಗಮನಕ್ಕೆ ತಂದರು.
ಈ ಹಿಂದೆಯು ದಲಿತರಿಗೆ ತೊಂದರೆಯಾದ ಗ್ರಾಮಗಳಿಗೆ ಸೌಲಭ್ಯ ಒದಗಿಸುವ ಭರವಸೆ ನೀಡಿದ ಮೇಲೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಸಭೆಯಲ್ಲೂ ಹಾಗಾಗಬಾರದು ಎಂದು ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಹೆಚ್ಚುವರಿ ಎಸ್‌ಪಿ ಕಾಶಿನಾಥ ಎಸ್. ತಳಕೇರಿ, ತಹಸೀಲ್ದಾರ್ ಜಿ.ಎ. ಖಾಲೀಕ್, ತಾಪಂ ಇಒ ಅಬ್ದುಲ್ ಸಲಾಂ, ಸಿಪಿಐ ರವೀಂದ್ರ, ಪಿಎಎಸ್‌ಐ ರವಿಕುಮಾರ್ ಧರ್ಮಟ್ಟಿ ಸೇರಿದಂತೆ ಅಧಿಕಾರಿಗಳು, ದಲಿತ ಬಾಂಧವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement