ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಿದ್ಯುತ್ ಮಗ್ಗ ಒದಗಿಸಲು ಅರ್ಜಿ

Lingaraj Badiger
Updated On : 3 Jun 2013, 11:17 am

ಯಾದಗಿರಿ: ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಕೈಮಗ್ಗ ನೇಕಾರರಿಗೆ ವಿದ್ಯುತ್ ಮಗ್ಗಗಳನ್ನು ಒದಗಿಸುವ ಯೋಜನೆಯಡಿ ನೇಕಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಯೋಜನೆಯಡಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿರುವ ನೇಕಾರರು ಕೈಮಗ್ಗ ನೇಯ್ಗೆ ವೃತ್ತಿಯಿಂದ ವಿದ್ಯುತ್ ಮಗ್ಗ ನೇಯ್ಗೆ ವೃತ್ತಿಗೆ ಬದಲಾವಣೆ ಹೊಂದಬಯಸುವ ನೇಕಾರರಿಗೆ ಆದ್ಯತೆ ನೀಡಲಾಗುವುದು. ಫಲಾನುಭವಿಯು ಜಿಲ್ಲೆ ವ್ಯಾಪ್ತಿಯ ನಿವಾಸಿಯಾಗಿರಬೇಕು. ನೇಯ್ಗೆ ವೃತ್ತಿಯನ್ನು ತಿಳಿದಿದ್ದು, ವಿದ್ಯುತ್ ಮಗ್ಗ ರಹಿತ ಕೂಲಿ ನೇಯ್ಗೆ ವೃತ್ತಿಯನ್ನು ತಿಳಿದಿರಬೇಕು. ನಿಯಮಾನುಸಾರ ಫಲಾನುಭವಿ ಆಯ್ಕೆ ಮಾಡಲಾಗುವುದು. ಭರ್ತಿ ಮಾಡಿದ ಅರ್ಜಿಗಳನ್ನು ಜೂ.30ರೊಳಗಾಗಿ ಸಲ್ಲಿಸಬೇಕು. ಅರ್ಜಿ ನಮೂನೆ ಮತ್ತು ಹೆಚ್ಚಿನ ವಿವರಗಳಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಸಿಎಂಸಿ ಕಾಂಪ್ಲೆಕ್ಸ್, ಚಿತ್ತಾಪುರ ರಸ್ತೆ, ಯಾದಗಿರಿ ಅವರನ್ನು ಸಂಪರ್ಕಿಸಲು ಕೋರಲಾಗಿದೆ.
ನೆಹಮಿಯಾ ಶಾಲೆಗೆ ಶೇ. 98 ಫಲಿತಾಂಶ
ಬೀದರ್: ನಗರದ ನೆಹಮಿಯಾ ಮೆಮೋರಿಯಲ್ ಪ್ರೌಢಶಾಲೆಗೆ ಇತ್ತೀಚೆಗೆ ನಡೆದ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಲಭಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಮನಮೋಹನ ನೆಹಮಿಯಾ ತಿಳಿಸಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 13 ವರ್ಷಗಳಿಂದ ನಗರದಲ್ಲಿ ಏಕೈಕ ಆಂಗ್ಲ ಮಾಧ್ಯಮದ ಶಾಲೆ ನಡೆಸುತ್ತಿದ್ದು ಪ್ರತಿ ವರ್ಷ ಉತ್ತಮ ಫಲಿತಾಂಶ ನೀಡುತ್ತಿದೆ. ಕ್ರೈಸ್ತ ಸಮುದಾಯಕ್ಕೆ ಸೇರಿದ ಸಂಸ್ಥೆಯಾಗಿದ್ದೂ ಇಲ್ಲಿ ಯಾವುದೇ ರೀತಿಯ ಭೇದ- ಭಾವ ಇಲ್ಲದೇ ಶಿಕ್ಷಣ ನೀಡಲಾಗುತ್ತಿದೆ ಎಂದರು. ಪ್ರಸಕ್ತ ಸಾಲಿನಲ್ಲಿ ಶಾಲೆಯಿಂದ ಒಟ್ಟು 38 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ 1 ಅಗ್ರಶ್ರೇಣಿ, 22 ಪ್ರಥಮ ದರ್ಜೆ, 9 ದ್ವಿತೀಯ ದರ್ಜೆ ಹಾಗೂ 5 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹೀಗೆ ಶಾಲೆಯ ಒಟ್ಟು ಫಲಿತಾಂಶ ಶೇ.98ರಷ್ಟು ಇದೆ ಎಂದರು. ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಒಬ್ಬ ವಿದ್ಯಾರ್ಥಿಗೆ ಕಳೆದ ವರ್ಷ ವಿದೇಶದಲ್ಲಿ ಉತ್ತಮ ಉದ್ಯೋಗ ಲಭಿಸಿದ್ದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಆದರೆ ಕೆಲವರು ಸಂಸ್ಥೆಯ ಹೆಸರು ಕೆಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಬಕ್ಕಪ್ಪ ಶೆರಿಕಾರ, ಸಂಸ್ಥೆಯ ಕಾರ್ಯಕಾರಿ ಅಧ್ಯಕ್ಷೆ ಮಿಶೇಲ್ ನೆಹಮಿಯಾ ಇದ್ದರು.
ಮನೋಹರ ನೇಮಕ
ಗುಲ್ಬರ್ಗ: ಕರ್ನಾಟಕ ಶುದ್ಧೀಕರಣ ಹೋರಾಟ ವೇದಿಕೆಯ ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ಸರ್ವಾನುಮತದಿಂದ ಮನೋಹರ ತಾಳಮಡಗಿ ಅವರನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ರಮೇಶ ಎಂ. ಸರಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement