ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಹಳ್ಳಿಗಳಲ್ಲಿ ಕುಡಿವ ನೀರು, ಮೂಲ ಸೌಲಭ್ಯವಿಲ್ಲ: ದೂರು

Lingaraj Badiger
Updated On : 3 Jun 2013, 11:18 am

ಶಹಾಪುರ: ತಾಲೂಕಿನ ವಿವಿಧ ಗ್ರಾಪಂ.ಗಳಲ್ಲಿ ಮೂಲ ಸೌಕರ್ಯಗಳಿಲ್ಲದೆ ಜನತೆ ಕಂಗಾಲಾಗಿದ್ದಾರೆ. ಜನತೆ ಕುಡಿವ ನೀರಿಲ್ಲದೇ ಪರಿತಪಿಸುತ್ತಿದ್ದಾರೆ. ಸಂಬಂಧಪಟ್ಟ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಕೆಂದ್ರ ಕಚೇರಿಗೆ ಬಾರದೇ ಬೇಜವಾಬ್ದಾರಿತನ ತೋರುತ್ತಿದ್ದಾರೆ ಎಂದು ಕರವೇ ತಾಲೂಕಾಧ್ಯಕ್ಷ ಭೀಮು ಶಖಾಪುರ ಆರೋಪಿಸಿದ್ದಾರೆ.
  ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ಮುಖಾಂತರ ಮನವಿ ಪತ್ರ ಸಲ್ಲಿಸಿದ ಅವರು, ಸಂಬಂಧಪಟ್ಟ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿಗಾಗಿ ಸರ್ಕಾರ ಟಾಸ್ಕ್‌ಫೋರ್ಸ್ ಮತ್ತು ಬರ ಪರಿಹಾರ ಯೋಜನೆಯಡಿಯಲ್ಲಿ ವಿವಿಧ ಗ್ರಾಮಗಲ್ಲಿ ಕ್ರಿಯಾಯೋಜನೆ ತಯಾರಿಸಿ ಒಟ್ಟು 1.80 ಕೋಟಿ ವೆಚ್ಚದಲ್ಲಿ ಬೋರ್‌ವೆಲ್ ಹಾಗೂ ಇತರೆ ಕುಡಿಯುವ ನೀರಿಗಾಗಿ ವೆಚ್ಚ ಮಾಡಲಾಗುತ್ತಿದೆ. ಆದರೆ ಯಾವ ಹಳ್ಳಿಗಳಲ್ಲಿ ಕುಡಿಯುವ ನೀರು ಪೂರೈಕೆ ಕಾರ್ಯ ಮಾಡಿಲ್ಲ.
ಅಧಿಕಾರಿಗಳಿಂದ ತಪ್ಪು ಮಾಹಿತಿ: ಶಹಾಪುರ ಹಾಗೂ ಭೀಮರಾಯನಗುಡಿ ಮುಖ್ಯಾಧಿಕಾರಿಗಳು ಕುಡಿಯುವ ನೀರಿಗಾಗಿ ಯಾವ ಕ್ರಮ ಕೈಗೊಂಡಿಲ್ಲ. ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡುವ ಮುಖಾಂತರ ಸರ್ಕಾರದ ನೀತಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಕರವೇ ಮುಖಂಡರಾದ ವೆಂಕಟೇಶ ನಾಯ್ಕೋಡಿ, ವಿಜಯಸಿಂಗ್ ಠಾಕೂರ, ಸಿದ್ದು ಹೈಯಾಳ್ಕರ, ಸುರೇಶ ಗಂಗರಾಮ, ವಿಜಯಕುಮಾರ ತಾರಾಸಿಂಗ್, ಕುಮಾರ, ಸಂದೀಪ, ಇತರರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement