ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

5750 ಮನೆ ಹಂಚಿಕೆ ಮಾಹಿತಿಇಲ್ಲ: ಬೆನಕನಹಳ್ಳಿ

Lingaraj Badiger
Updated On : 4 Jun 2013, 11:14 am

ಅಫಜಲ್ಪುರ: ಶಾಸಕ ಮಾಲೀಕಯ್ಯ ಗುತ್ತೇದಾರ್ ಮಾರ್ಚ್ ತಿಂಗಳಲ್ಲಿ ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮದಿಂದ 5750 ಮನೆಗಳು ಹಂಚಿಕೆ ಮಾಡಿದ ಬಗ್ಗೆ ತಾಪಂ ಸದಸ್ಯರಿಗೆ ಯಾವುದೇ ಮಾಹಿತಿಯಿಲ್ಲ ಎಂದು ತಾಪಂ ಸದಸ್ಯ ಸಾ.ಸಿ. ಬೆನಕನಹಳ್ಳಿ ತಕರಾರು ಮಾಡಿದರು.
ಅದಕ್ಕೆ ತಾಪಂ ಸದಸ್ಯ ಶಿವಪುತ್ರಪ್ಪ ಗೌಡಗಾಂವ ಮಾತನಾಡಿ, ಶಾಸಕರು ತಾಪಂ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ ಎಂದು ವಾದ ಮಾಡಿದ ಘಟನೆ ತಾಪಂ ಸಾಮಾನ್ಯ ಸಭೆಯಲ್ಲಿ ಜರುಗಿತು.
ಶಾಸಕರು ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿ ಗುಡಿಸಲು ಮನೆಗಳಿಗೆ ಭೇಟಿ ನೀಡಿ ಸ್ಥಳದಲ್ಲಿಯೇ ಯಾದಿ ತಯಾರಿಸಿ ಮನೆ ಮಂಜೂರು ಮಾಡಿದ್ದಾರೆ. ಪ್ರಾಮಾಣಿಕವಾಗಿ ಮನೆ ವಿತರಣೆ ಮಾಡಲಾಗಿದೆ ಎಂದು ಶಿವಪುತ್ರಪ್ಪ ಗೌಡಗಾಂವ ತಿಳಿಸಿದರು.
ಇದಕ್ಕೆ ಪ್ರತಿಯಾಗಿ ಮಾತನಾಡಿದ ತಾಪಂ ಸದಸ್ಯ ಸಾ.ಸಿ. ಬೇನಕನಹಳ್ಳಿ, ಶಾಸಕರು ಮನೆ ಹಂಚಿಕೆ ಮಾಡಿರುವ ಬಗ್ಗೆ ನಮಗೆ ಯಾವುದೇ ತಕರಾರು ಇಲ್ಲ. ಆದರೆ, ಯಾವ ಗ್ರಾಮದಲ್ಲಿ ಎಷ್ಟು ಮನೆಗಳನ್ನು ಹಂಚಿಕೆ ಮಾಡಿದ್ದಾರೆ, ಫಲಾನುಭವಿಗಳ ಯಾದಿ ನಮಗೆ ತಲುಪಿಲ್ಲ ಎಂದರು.
ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮದ ವಿಭಾಗ ನೋಡಿಕೊಳ್ಳುತ್ತಿರುವ ತಾಪಂ ಸಿಬ್ಬಂದಿ ದಿಗಂಬರ ಅವರು, ಶಾಸಕರು 20 ಗ್ರಾಮಗಳಿಗೆ ಸುಮಾರು 5750 ಮನೆ ಹಂಚಿಕೆ ಮಾಡಿದ ಮಾಹಿತಿಯನ್ನು ಸಭೆಗೆ ತಿಳಿಸಿದರು.
ಶಾಸಕರು ಮನೆ ಹಂಚಿಕೆ ಮಾಡುವಾಗ ಆ ಭಾಗದ ಜಿಪಂ, ತಾಪಂ ಸದಸ್ಯರು ಜತೆಯಲ್ಲಿಯೆ ಇದ್ದರು. ಹೀಗಾಗಿ ಮನೆ ಹಂಚಿಕೆಯಲ್ಲಿ ಎಲ್ಲ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಾಪಂ ಸಿಬ್ಬಂದಿ ದಿಗಂಬರ ಸಭೆಯ ಗಮನಕ್ಕೆ ತಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement