ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನೇಪಾಳಿ ವರನ ವರಿಸಿದ ಲಿಂಗಾಯಿತ ವಧು

Lingaraj Badiger
Updated On : 4 Jun 2013, 11:17 am

ಯಾದಗಿರಿ: ಆತ ನೇಪಾಳಿ ಯುವಕ. ಕೆಲಸ ಅರಸಿ ಇಲ್ಲಿಗೆ ಬಂದು ಈಗ ಇಲ್ಲಿಯೇ ತನ್ನ ಬಾಳ ಸಂಗಾತಿಯನ್ನು ವರಿಸಿದ್ದಾನೆ. ಆದರೆ ಇದು ಅಂತರ್ಜಾತಿ ವಿವಾಹವೇ ಹೊರತು ಪ್ರೇಮ ವಿವಾಹ ಪ್ರಕರಣವಲ್ಲ.
  ಕಮಲ್ ಭಂಡಾರಿ ಎಂಬ ನೇಪಾಳಿ ಯುವಕ. ಕಳೆದ ಮೇ 31ರಂದು ಕಸಬಾ ಲಿಂಗಸ್ಗೂರಿನ ಲಿಂಗಾಯಿತ ಯುವತಿ ವಿಜಯಲಕ್ಷ್ಮಿ ಜೊತೆಗೆ ಸಪ್ತಪದಿ ತುಳಿದಿದ್ದಾನೆ. ಈತ 5 ವರ್ಷಗಳ ಹಿಂದೆ ಕೆಲಸ ಅರಸಿ ಯಾದಗಿರಿಗೆ ಬಂದಿದ್ದ. ಇಲ್ಲಿಯ ಗಾಂಧಿ ಚೌಕದಲ್ಲಿನ ಫಾಸ್ಟ್ ಫುಡ್ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ನಂತರ ಮತ್ತೆ ನೇಪಾಳಕ್ಕೆ ಹೋಗಲು ಮನಸ್ಸು ಮಾಡದ ಈತ ಇಲ್ಲಿಯೇ ತನಗೊಂದು ವಧು ನೋಡುವಂತೆ ತಾನು ಕೆಲಸಕ್ಕಿದ್ದ ಅಂಗಡಿ ಮಾಲೀಕರಲ್ಲಿ ಮನದಾಸೆ ಬಿಚ್ಚಿಟ್ಟ.
ಅದರಂತೆ ಮಾಲೀಕ ಅಮರೇಶ ಹಿರೇಮಠ ಹಾಗೂ ಅವರ ಸ್ನೇಹಿತರು ಕಸಬಾ ಲಿಂಗಸ್ಗೂರಿನ ಮಾರುತೆಪ್ಪ ಗುಂತಗೋಳ ಎಂಬವರನ್ನು ಸಂಪರ್ಕಿಸಿ, ಅವರು ತಮ್ಮ ಮಗಳು ವಿಜಯಲಕ್ಷ್ಮಿಯನ್ನು ಕೇಳಿದಾಗ ಒಪ್ಪಿಗೆ ನೀಡಿದಳು. ಆಗ ಪಾಲಕರು ಕಮಲ್‌ಗೆ ಮಗಳನ್ನು ಧಾರೆಯೆರೆಯಲು ಒಪ್ಪಿದರು.
ಲಿಂಗಾಯತ ಸಂಪ್ರದಾಯದಂತೆ..: ಲಿಂಗಾಯಿತ ಸಮುದಾಯಕ್ಕೆ ಸೇರಿದ್ದರೂ ಅವರು ಜಾತಿ ಮೀರಿ ಮಗಳನ್ನು ನೇಪಾಳಿ ಯುವಕನಿಗೆ ಮಗಳನ್ನು ನೀಡಲು ಒಪ್ಪಿಗೆ ನೀಡಿದ್ದು ಮಾದರಿಯೆನಿಸಿದೆ. ಮೇ 31ರಂದು ಲಿಂಗಸ್ಗೂರಿನಲ್ಲಿ ಇವರಿಬ್ಬರ ವಿವಾಹ ಲಿಂಗಾಯತ ಧರ್ಮದ ಸಂಪ್ರದಾಯದಂತೆ ನೆರವೇರಿತು. ಇಲ್ಲಿ ನಡೆದದ್ದು ರೀತಿ ರಿವಾಜು, ಜಾತಿ- ಧರ್ಮ, ನೀತಿ, ಸೀಮೆಗಳನ್ನು ದಾಟಿದ ಮದುವೆ ಎಂದರೆ ತಪ್ಪಾಗಲಿಕ್ಕಿಲ್ಲ. ಯಾದಗಿರಿಯ ಅಮರೇಶ, ಕ್ರಿಸ್ಟೋಫರ್, ಶೇಖ್, ಪಂಪಯ್ಯ, ಚೆಂದ್ರಶೇಖರ ಹಾಗೂ ಮಿತ್ರರು ಅಪರೂಪದ ವಿವಾಹಕ್ಕೆ ಸಾಕ್ಷಿಯಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement