ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬ್ಯಾಂಕುಗಳಲ್ಲಿ 'ಖಾತ್ರಿ' ಖಾತೆ ಹೊಂದಲು ಸಿಇಒ ಸೂಚನೆ

Lingaraj Badiger
Updated On : 4 Jun 2013, 11:14 am

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.3
ಉದ್ಯೋಗ ಖಾತ್ರಿ ಯೋಜನೆಯಡಿ ಮಾರ್ಚ್ 31ರಂದು ಅಂಚೆ ಕಚೇರಿಯಲ್ಲಿ ಒಟ್ಟು 1,33,701 ಉಳಿತಾಯ ಖಾತೆಗಳನ್ನು ಹೊಂದಿದ್ದು, ಜೂ.10ರೊಳಗಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 1,33,701 ಉಳಿತಾಯ ಖಾತೆಗಳನ್ನು ತೆರೆಯುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಲ್ಲವಿ ಆಕುರಾತಿ ಸೂಚಿಸಿದ್ದಾರೆ.
ತಾಲೂಕುವಾರು ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿರುವ ಖಾತೆಗಳ ಸಂಖ್ಯೆ ಇಂತಿವೆ- ಅಫಜಲ್ಪುರ- 6,068, ಆಳಂದ- 48,852, ಚಿಂಚೋಳಿ- 25,514, ಚಿತ್ತಾಪುರ- 11,412, ಗುಲ್ಬರ್ಗ- 5,734, ಜೇವರ್ಗಿ- 30,110 ಮತ್ತು ಸೇಡಂ- 6,011. ಹೀಗೆ ಒಟ್ಟು 1,33,701 ಕೂಲಿ ಕಾರ್ಮಿಕರು ಅಂಚೆ ಕಚೇರಿಯ ಉಳಿತಾಯ ಖಾತೆಗಳನ್ನು ಹೊಂದಿದ್ದಾರೆ.
ಅವರೆಲ್ಲರೂ ಜೂ.10ರೊಳಗಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಉಳಿತಾಯ ಖಾತೆಯನ್ನು ತೆರೆಯಲು ಸೂಚಿಸಲಾಗಿದೆ. ಒಂದು ವೇಳೆ ಸದರಿ ದಿನಾಂಕದೊಳಗಾಗಿ ಉಳಿತಾಯ ಖಾತೆ ತೆರೆಯದಿದ್ದರೆ ಪ್ರಸ್ತುತ ಗುಲ್ಬರ್ಗ ಜಿಲ್ಲೆಯ ಇಎಫ್‌ಎಂಎಸ್ ಆಗಿರುವುದರಿಂದ ರಾಜ್ಯ ಮಟ್ಟದಿಂದ ಬ್ಯಾಂಕ್ ಖಾತೆ ಮೂಲಕ ಕೂಲಿ ಹಣ ಪಾವತಿ ಮಾಡಲು ಸಾಧ್ಯವಾಗುವುದಿಲ್ಲ. ಆಗ ಕೂಲಿ ಹಣ ಸಿಗುವುದಿಲ್ಲ. ಆದ್ದರಿಂದ ಅಂಚೆ ಕಚೇರಿಯಲ್ಲಿ ಖಾತೆ ಹೊಂದಿರುವವರು ಕೂಡ ಬ್ಯಾಂಕಿನಲ್ಲಿ ಖಾತೆ ತೆರೆಯುವುದು ಕಡ್ಡಾಯವಾಗಿದೆ.
ಅಲ್ಲದೆ ಉದ್ಯೋಗ ಚೀಟಿ ಹೊಂದಿ ಬ್ಯಾಂಕಿನಲ್ಲಿ ಖಾತೆ ಇಲ್ಲದವರು ರಾಷ್ಟ್ರೀಕೃತ ಬ್ಯಾಂಕ್, ಪ್ರಾಂತೀಯ ಗ್ರಾಮೀಣ ಬ್ಯಾಂಕ್(ಕೆಜಿಬಿ)ಗಳಲ್ಲಿ ಬ್ಯಾಂಕ್ ಅಕೌಂಟ್ ತೆರೆಯುವಂತೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement