ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಮುಂಗಾರು ಬಿತ್ತನೆ ಬೀಜ ದಾಸ್ತಾನು'

Lingaraj Badiger
Updated On : 4 Jun 2013, 11:14 am

ಅಫಜಲ್ಪುರ: ತಾಲೂಕಿನಲ್ಲಿ ಮುಂಗಾರು ಬಿತ್ತನೆಗಾಗಿ ಬೇಕಾಗಿರುವ ಬೀಜವನ್ನು ದಾಸ್ತಾನು ಮಾಡಲಾಗಿದೆ. ಇಲ್ಲಿಯವರೆಗೆ ಸಹಾಯಧನದ ಆದೇಶಕ್ಕಾಗಿ ಕಾಯುತ್ತಿದ್ದೇವೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ ಬಾಡಗಿ ಮಾಹಿತಿ ನೀಡಿದರು.
ತಾಪಂ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದ ಅವರು, ತಾಲೂಕಿನಲ್ಲಿ ವಾಡಿಕೆ ಮಳೆ 667.3 ಮೀ.ಮೀ ಇದ್ದು, ಕಳೆದ ವರ್ಷ ತಾಲೂಕಿನಲ್ಲಿ ಮಳೆ ಮಾಪನ ಕೇಂದ್ರಗಳಾದ ಅಫಜಲ್ಪುರ 560.8, ಕರಜಗಿ 575.1, ಅತನೂರ 570.6, ಗೊಬ್ಬೂರ(ಬಿ)668.8 ಮೀ.ಮೀ ಮಳೆಯಾಗಿದೆ. ಪ್ರಸಕ್ತ ಮೇ ತಿಂಗಳಲ್ಲಿ 33.8 ಮಳೆಯಾಗಬೇಕಾಗಿತ್ತು. 11.4 ಮೀ.ಮೀ ಮಳೆಯಾಗಿದೆ. ಜೂನ್ ತಿಂಗಳಲ್ಲಿ 99.3 ಮಳೆಯಾಗಬೇಕು ಎಂದರು. ತಾಪಂ ವಿಶೇಷ ಘಟಕ ಯೋಜನೆ ಅಡಿಯಲ್ಲಿ 69 ರೈತರ ಕೃಷಿ ಉಪಕರಣಗಳಿಗಾಗಿ ಒಟ್ಟು 4.91 ಲಕ್ಷ ಅನುದಾನ ಬಿಡುಗಡೆಯಾಗಿತ್ತು. ಅದರಲ್ಲಿ 4.90 ಲಕ್ಷ ಖರ್ಚು ಮಾಡಲಾಗಿದೆ ಎಂದು ಹೇಳಿದರು.
ತಾಪಂ ಸದಸ್ಯರಾದ ಬೆನಕನಹಳ್ಳಿ, ದತ್ತು ಸಿಂಧೆ, ಶಿವಪುತ್ರಪ್ಪ ಗೌಡಗಾಂವ, ಶಿವಾನಂದ ಗಾಡಿ ಸಾಹುಕಾರ, ಹುಣಚಪ್ಪ ಅಂತರಗಂಗಿ ಮಾತನಾಡಿ, ತಾಲೂಕಿನಲ್ಲಿ ಕಳೆದ 2 ವರ್ಷಗಳಿಂದ ಮಳೆಯಿಲ್ಲದೇ ರೈತರು ಕಂಗಾಲಾಗಿದ್ದಾರೆ. ಗೊಬ್ಬರ ಬೆಲೆ ಗಗನಕ್ಕೆರಿದೆ, ಗೊಬ್ಬರಕ್ಕೆ ಸಹಾಯಧನ ನೀಡಬೇಕು. ಶೇ.75ರಷ್ಟು ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಿಸಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement