ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಗುರುವಂದನಾ ಸಮಾರಂಭ

Lingaraj Badiger
Updated On : 5 Jun 2013, 11:14 am

ಸುರಪುರ: ತಾಲೂಕಿನ ಕರಡಕಲ್ ಕೋರಿಸಿದ್ದೇಶ್ವರ ಶಾಖಾ ಮಠದಲ್ಲಿ ಜೂ. 19ರಂದು ಸಂಜೆ 4ಕ್ಕೆ ಸಗರನಾಡು ಸೇವಾ ಪ್ರತಿಷ್ಠಾನ ವತಿಯಿಂದ ನಾಲವಾರದ ತೋಟೇಂದ್ರ ಸ್ವಾಮೀಜಿಗಳಿಗೆ ಗುರು ವಂದನಾ ಸಮಾರಂಭ ಹಾಗೂ ನಾಲವಾರ ಶ್ರೀಗಳ ಕುರಿತು ರಚಿಸಲಾಗಿರುವ ಗುರು ವಚನಪ್ರಭೆ ಗ್ರಂಥ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ತಿಳಿಸಿದರು. ಗುಲ್ಬರ್ಗ ವಿಶ್ವವಿದ್ಯಾಲಯವು ತನ್ನ ವಾರ್ಷಿಕ ಘಟಿಕೋತ್ಸವದಲ್ಲಿ ನಾಲವಾರ ಶ್ರೀಗಳಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿರುವ ಹಿನ್ನೆಲೆಯಲ್ಲಿ ಈ ಸಮಾರಂಭ ಏರ್ಪಡಿಸಲಾಗಿದೆ ಎಂದು ಅಂಗಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕರಡಕಲ್‌ನ ಶಾಂತರುದ್ರಮುನಿ ಸ್ವಾಮೀಜಿ ಸಮಾರಂಭದ ನೇತೃತ್ವ ವಹಿಸುವರು. ಮುದನೂರಿನ ಮಲ್ಲಿಕಾರ್ಜುನ ದೇವರು ಸಮ್ಮುಖ ವಹಿಸುವರು. ಕೆಂಭಾವಿ, ನಗನೂರು, ಯಡ್ರಾಮಿ, ಕೈರಾವಡಗಿ, ಹರನಾಳ, ನಾವದಗಿ, ಕೊಡೇಕಲ್, ಕುಂಟೋಜಿ ಮಠಗಳ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದಾರೆ. ದೇವರ ಹಿಪ್ಪರಗಿ, ಯಾದಗಿರಿ, ಸುರಪುರ, ಶಹಾಪುರ, ಲಿಂಗಸ್ಗೂರು ಶಾಸಕರಾದ ಎ.ಎಸ್. ನಡಳ್ಳಿ, ಡಾ. ಎ.ಬಿ. ಮಾಲಕರಡ್ಡಿ, ಗುರು ಪಾಟೀಲ್ ಶಿರವಾಳ, ರಾಜಾ ವೆಂಕಟಪ್ಪನಾಯಕ, ಮಾನಪ್ಪ ವಜ್ಜಲ್ ಸೇರಿದಂತೆ ರಾಜ್ಯದ ಅನೇಕ ಕವಿ, ಸಾಹಿತಿಗಳು ಮತ್ತು ಹೋರಾಟಗಾರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಖಾತ್ರಿ ಅವ್ಯವಹಾರ, ಕ್ರಮಕ್ಕೆ ಆಗ್ರಹ
ಶಹಾಪುರ: ಸರ್ಕಾರದ ಜನಪರ ಯೋಜನೆಗಳು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಅಸಮರ್ಥರಾದ ವನದುರ್ಗ ಗ್ರಾಪಂ ಅಭಿವೃದ್ಧಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಹಾಪುರ ತಾಲೂಕು ಕೊರಮ ಸಮಾಜದ ಅಧ್ಯಕ್ಷ ಯಲ್ಲಪ್ಪ ಭಜಂತ್ರಿ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement