ಸಚಿವೆ ಉಮಾಶ್ರೀ- ಕಲಾವಿದ ವ್ಹಿಟಿಎನ್ ಭೇಟಿ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.4
ಬೆಳಗಾವಿ ಸುವರ್ಣ ಸೌಧದ ರಾಷ್ಟ್ರೀಯ ಲಾಂಛನ ಅಶೋಕ ಸ್ತಂಭವನ್ನು ನಿರ್ಮಿಸಿ ಚಿರಪರಿಚಿತರಾದ ನಗರದ ಖ್ಯಾತ ಲೋಹ ಶಿಲ್ಪಿ ವಿಶ್ವೇಶ್ವರಯ್ಯ ಟಿ.ಎನ್ ಅವರು ಸೋಮವಾರ ಬೆಂಗಳೂರಿನಲ್ಲಿ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರನ್ನು ಭೇಟಿ ಮಾಡಿದರು. ಸರ್ಕಾರದ ಎಲ್ಲ ಸೌಲಭ್ಯಗಳು ಕಲಾವಿದರಿಗೆ ತಲುಪಿಸುವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸಚಿವೆ ಉಮಾಶ್ರೀ, ಕಲಾವಿದರ ಆಹ್ವಾನಕ್ಕೆ ಒಪ್ಪಿ, ತಾವು ಗುಲ್ಬರ್ಗಕ್ಕೆ ಬಂದಾಗ ವ್ಹಿಟಿಎನ್ ಸ್ಟುಡಿಯೋಕ್ಕೆ ಭೇಟಿ ನೀಡುವುದಾಗಿ ಭರವಸೆ ನೀಡಿದರು.
--