ಸೌಲಭ್ಯ ವಂಚಿತ ಬಡಾವಣೆಗಳಿಗೆ ಎಸಿ ಭೇಟಿ
ಶಹಾಪುರ: ಪಟ್ಟಣದ ಹಲವು ವಾರ್ಡುಗಳಲ್ಲಿ ಸೌಲಭ್ಯವೆಂಬುದು ಮರೀಚಿಕೆಯಾಗಿದ್ದು, ಸ್ಥಳೀಯ ಪುರಸಭೆ ಆಡಳಿತ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ನಿವಾಸಿಗಳು ಆರೋಪಿಸಿದ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಬಿ.ಪಿ. ವಿಜಯ್ ಅವರು ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಪುರಸಭೆಯ ಪ್ರತಿಪಕ್ಷದ ಸದಸ್ಯರು ಇತ್ತೀಚಿಗೆ ಯಾದಗಿರಿಗೆ ತೆರಳಿ ಸಹಾಯಕ ಆಯುಕ್ತ ಬಿ.ಪಿ.ವಿಜಯ ಅವರನ್ನು ಭೇಟಿಯಾಗಿ, ಸೌಲಭ್ಯ ಒದಗಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚರಂಡಿ, ಕುಡಿಯುವ ನೀರಿನ ಸಮಸ್ಯೆ, ಕಳಪೆ ಕಾಮಗಾರಿಗಳು ಇವೆಲ್ಲವನ್ನು ಪರಿಶೀಲಿಸಿದ ಸಹಾಯಕ ಆಯುಕ್ತರು, ಈ ಕುರಿತು ಪುರಸಭೆಯ ಅಧಿಕಾರಿಗಳಿಗೆ ಸೂಚಿಸಿ ಅವಶ್ಯಕವಿರುವ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ತಿಳಿಸಿದರು. ಸದಸ್ಯರಾದ ವಸಂತ ಸುರಪುರ, ಲಾಲಹ್ಮದ ಖುರೇಶಿ, ಬಸವರಾಜ ಆನೇಗುಂದಿ, ದೊಡ್ಡಮಾನಯ್ಯ ಇತರರು ಇದ್ದರು.