ಕಾರು ಡಿಕ್ಕಿ; ವ್ಯಕ್ತಿ ಸಾವು
ಗುಲ್ಬರ್ಗ: ಕಾರು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಸಾವಿಗೀಡಾದ ಘಟನೆ ಮಹಿಬೂಬ್ ನಗರದ ಬಳಿ ಮಂಗಳವಾರ ನಡೆದಿದೆ. ಯುಸಫ್ ಅಲಿ ಎಂಬ ನತದೃಷ್ಟ ಸಾವಿಗೀಡಾಗಿದ್ದಾನೆ. ಯುಸಫ್ ಅಲಿ ರಸ್ತೆಯ ಪಕ್ಕದಲ್ಲಿ ಕುಳಿತುಕೊಂಡಿರುವ ಸಂದರ್ಭದಲ್ಲಿ ಇನ್ನೋವಾ ಕಾರಿನ ಚಾಲಕ ಅತಿ ವೇಗವಾಗಿ ಚಲಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಆತ ತೀವ್ರ ಗಾಯಗೊಂಡಿದ್ದನು. ಚಿಕಿತ್ಸೆಗಾಗಿ ನಗರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ ಡಿಕ್ಕಿ; ಒಬ್ಬನಿಗೆ ಗಾಯ
ಗುಲ್ಬರ್ಗ: ನಗರದ ವಾಣಿಜ್ಯ ತೆರಿಗೆ ಕಚೇರಿ ಬಳಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬುಲೇರೋ ಜೀಪಿನ ಮುಂದಿನ ಭಾಗ ಜಖಂಗೊಂಡಿದ್ದು, ವ್ಯಕ್ತಿಯೊಬ್ಬ ಗಾಯಗೊಂಡ ಘಟನೆ ಕಳೆದ ಸೋಮವಾರ ನಡೆದಿದೆ. ರಾಜೇಶ್ವರದಿಂದ ಮದುವೆ ಮುಗಿಸಿಕೊಂಡು ಗುಲ್ಬರ್ಗಕ್ಕೆ ಬರುತ್ತಿದ್ದ ಜೀಪಿಗೆ ಬಸ್ ಡಿಕ್ಕಿ ಹೊಡೆದಿದ್ದು, ಜೀಪು ಜಖಂಗೊಂಡು ಅಮೃತಪ್ಪ ಪಾಟೀಲ್ ಎಂಬಾತ ಗಾಯಗೊಂಡಿದ್ದಾನೆ. ಈ ಕುರಿತು ಗುಲ್ಬರ್ಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡು ಅಂಗಡಿ ಕಳ್ಳತನ
ಗುಲ್ಬರ್ಗ: ಫರಹತಾಬಾದ್‌ನಲ್ಲಿರುವ ಎರಡು ಅಂಗಡಿಗಳ ಶೆಟ್ಟರ್‌ನ ಕೀಲಿ ಮುರಿದು ಒಳನುಗ್ಗಿದ ಕಳ್ಳರು ಒಟ್ಟು 8,600 ನಗದು ಕಳ್ಳತನ ಮಾಡಿದ್ದಾರೆ.
ಬಸವರಾಜ ತಂದೆ ಶರಣಪ್ಪ ಸಬಶೆಟ್ಟಿ ಅವರಿಗೆ ಸೇರಿದ ಮೆಡಿಕಲ್ ಸ್ಟೋರ್ ಮತ್ತು ಬಸವರಾಜ ತಂದೆ ಈಶ್ವರಾಜ ಹಲಬುರ್ಗಿ ಎಂಬುವರಿಗೆ ಸೇರಿದ ಅಂಗಡಿಗಳು ಕಳ್ಳತನವಾಗಿವೆ. ಬಸವರಾಜ ಅವರ ಮೆಡಿಕಲ್ ಅಂಗಡಿಯ ಶೆಟ್ಟರ್ ಅನ್ನು ಕಬ್ಬಿಣದ ರಾಡ್‌ನಿಂದ ಮುರಿದು ನಗದು 6, 800 ಹಾಗೂ ಬಸವರಾಜ ಈಶ್ವರಾಜ ಹಲಬುರ್ಗಿ ಅವರ ಎಲೆಕ್ಟ್ರಿಕಲ್, ಮೊಬೈಲ್ ಅಂಗಡಿ ಮುರಿದು ನಗದು 1800 ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.