ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಾರು ಡಿಕ್ಕಿ: ಮಹಿಳೆ ಸಾವು

Lingaraj Badiger
Updated On : 7 Jun 2013, 11:05 am

ಗುಲ್ಬರ್ಗ: ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ನಗರದ ಮೇಜೆಸ್ಟಿಕ್ ಫಂಕ್ಷನ್ ಹಾಲ್ ಎದುರುಗಡೆ ಮಂಗಳವಾರ ನಡೆದಿದೆ. ಮಿಲ್ಲತ್ತನಗರದ ಹನೀಪಾ ಗಂಡ ಮಹ್ಮದ್ ಹುಸೇನ್(65) ಮೃತರು. ಹನೀಪಾ ಆಟೋದಿಂದ ಇಳಿದು ರಸ್ತೆ ಕ್ರಾಸ್ ಮಾಡುತ್ತಿದ್ದಾಗ ಖರ್ಗೆ ಪೆಟ್ರೋಲ್ ಬಂಕ್ ಕಡೆಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ತೀವ್ರ ಗಾಯಗೊಂಡಿದ್ದಳು. ಗಾಯಗೊಂಡ ಮಹಿಳೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾರ್ ಚಾಲಕ ಪರಾರಿಯಾಗಿದ್ದಾನೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಷುಲ್ಲಕ ಕಾರಣ; ವ್ಯಕ್ತಿಯ ಕೊಲೆ
ಗುಲ್ಬರ್ಗ: ಕ್ಷುಲ್ಲಕ ಕಾರಣಕ್ಕೆ ಹೋಟೆಲ್‌ನಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಬುಧವಾರ ಸೇಡಂ ತಾಲೂಕಿನ ಮುಧೋಳನಲ್ಲಿ ನಡೆದಿದೆ.
ಮದನಾ ಗ್ರಾಮದ ಲಚಮಪ್ಪ ಮೃತನು. ಲಚಮಪ್ಪ ಇತರರು ಮುಧೋಳದ ಬಸ್ ನಿಲ್ದಾಣದ ಬಳಿ ಇರುವ ಫಾಸ್ಟ್ ಫುಡ್ ಹೋಟೆಲ್‌ಗೆ ಹೋಗಿ ಉಪಹಾರ ಸೇವಿಸಿದ್ದರು. ಲಚಮಪ್ಪ ಸಿಂಗಲ್ ಪ್ಲೇಟ್ ಟಿಫನ್ ಕೊಡುವಂತೆ ಹೇಳಿದ್ದನು. ಆಗ ಹೋಟೆಲ್‌ನ ನಾಗೇಶ ತಂದೆ ಹಣಮಂತ ಸಿಂಗಲ್ ಪ್ಲೇಟ್ ಕೊಡುವುದಿಲ್ಲ ಎಂಬ ಮಾತಿಗೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ನಾಗೇಶ ಹೋಟೆಲ್‌ನಲ್ಲಿರುವ ಕಬ್ಬಿಣದ ರಾಡು ತೆಗೆದುಕೊಂಡು ತಲೆಗೆ ಹೊಡೆದ ಪರಿಣಾಮ ಲಚಮಪ್ಪ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಿಣೆಗಾಗಿ ಮಹಿಳೆ ಬಲಿ
ಗುಲ್ಬರ್ಗ: 20 ಸಾವಿರ ಹೆಚ್ಚಿನ ವರದಕ್ಷಿಣೆ ತರುವಂತೆ ಪೀಡಿಸಿ ಗಂಡ, ಅತ್ತೆ, ಮಾವ ಸೇರಿ ಗೃಹಿಣಿಯೊಬ್ಬಳಿಗೆ ಕುತ್ತಿಗೆ ಹಿಸುಕಿ ಕೊಲೆ ಮಾಡಿದ ಘಟನೆ ಚಿಂಚೋಳಿ ತಾಲೂಕಿನ ಜಿಲ್ವರ್ಶಾ ತಾಂಡಾದಲ್ಲಿ ಬುಧವಾರ ನಡೆದಿದೆ.
ನೀಲಾಬಾಯಿ ಗಂಡ ಶ್ರವಣ ಮೃತ ಮಹಿಳೆ. ಮದುವೆ ಸಂದರ್ಭದಲ್ಲಿ 50 ಸಾವಿರ ನಗದು, ಬಂಗಾರ, ಬೈಕ್ ಕೊಟ್ಟು ಮದುವೆ ಮಾಡಲಾಗಿತ್ತು. ಗರ್ಭಿಣಿಯಾದ ಸಂದರ್ಭದಲ್ಲಿ ತವರು ಮನೆಯಿಂದ ಇನ್ನೂ 20 ಸಾವಿರ ತೆಗೆದುಕೊಂಡು ಬರುವಂತೆ ಗಂಡ ಶ್ರವಣ, ಅತ್ತೆ ದಸಲಿಬಾಯಿ, ಮಾವ ರಾಮಸಿಂಗ್ ಸೇರಿ ನೀಲಾಬಾಯಿಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಕುಂಚಾವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement