ತರಬೇತಿ ಶಿಬಿರ
ಗುಲ್ಬರ್ಗ: ನಗರದ ವಿಕಾಸ ಅಕಾಡೆಮಿ ಸಂಸ್ಥೆಯು ಉದ್ಯೋಗ ಅರ್ಹತಾ ಕೌಶಲ್ಯ ಅಭಿವೃದ್ಧಿಗಾಗಿ 3 ತಿಂಗಳ ಅವಧಿಯ ಗ್ರಾಜ್ಯುಯೇಟ್ ಫಿನಿಶಿಂಗ್ ಸ್ಕೂಲ್ ತರಬೇತಿ ಶಿಬಿರವನ್ನು ಆಯೋಜಿಸಿದೆ. 2010- 2013 ಅವಧಿಯ ಪದವೀಧರರು ಪ್ರವೇಶಕ್ಕೆ ಅರ್ಹತೆ ಪಡೆದಿರುತ್ತಾರೆ. ಜೂನ್ 25 ರೊಳಗಾಗಿ ವಿಕಾಸ ಅಕಾಡೆಮಿ, ಐವಾನ್-ಇ-ಶಾಹಿ ಅತಿಥಿ ಗೃಹದ ಮುಂದೆ, ಪಿಡಿಎ ಎಂಜಿನಿಯರಿಂಗ್ ಕಾಲೇಜ್ ರಸ್ತೆಯಲ್ಲಿರುವ ಕಚೇರಿಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಪ್ರವೇಶ ಪರೀಕ್ಷೆ ಜೂನ್ 28ರಂದು ಬೆಳಗ್ಗೆ 11ಕ್ಕೆ ನಡೆಯಲಿದೆ. ಆಸಕ್ತ ಪದವೀಧರರು ತರಬೇತಿ ಪ್ರಯೋಜನ ಪಡೆಯಲು ಕೋರಲಾಗಿದೆ.
ಶಿಬಿರಕ್ಕೆ ಆಹ್ವಾನ
ಗುಲ್ಬರ್ಗ: ಮಂಗಳೂರಿನ ಕಾಲೇಜ್ ಆಫ್ ಲೀಡರ್ ಶಿಫ್ ಅಂಡ್ ಹ್ಯುಮನ್ ರಿಸೋರ್ಸ್ ಡೆವಲಪ್ಮೆಂಟ್ ಸಂಸ್ಥೆ ಜುಲೈ ತಿಂಗಳಿನ ಪದವೀಧರರಿಗಾಗಿ ಉದ್ಯೋಗ ಅರ್ಹತಾ ಕೌಶಲ್ಯ ತರಬೇತಿ ಶಿಬಿರ ಹಮ್ಮಿಕೊಂಡಿದೆ. ಜೂನ್ 25 ರೊಳಗಾಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ. ಆಸಕ್ತರು ಐವಾನ್-ಇ-ಶಾಹಿ ಅತಿಥಿ ಗೃಹದ ಮುಂದಿರುವ ಕಚೇರಿಗೆ ಬೆಳಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 2.30 ಗಂಟೆಯವರೆಗೆ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ 08472- 273810ಗೆ ಸಂಪರ್ಕಿಸಬಹುದು.
ಅರ್ಜಿ ಆಹ್ವಾನ
ಗುಲ್ಬರ್ಗ: ನಗರದ ಕೊತ್ತಲ ಬಸವೇಶ್ವರ ಕಮ್ಯುನಿಟಿ ಕಾಲೇಜು ಎಸ್ಎಸ್ಎಲ್ಸಿ, ಪಿಯುಸಿ ಉತ್ತೀರ್ಣ ವಿದ್ಯಾರ್ಥಿವಿದ್ಯಾರ್ಥಿನಿಯರಿಂದ 2 ವರ್ಷದ ಹೆಲ್ತ್ಕೇರ್ ಅಸಿಸ್ಟೆಂಟ್ ಮತ್ತು ಆಫೀಸ್ ಮ್ಯಾನೇಜ್ಮೆಂಟ್ ಅಂಡ್ ಪ್ರೊಸಿಜರ್ ಡಿಪ್ಲೊಮಾ ಕೋರ್ಸ್ಗಳಿಗೆ ಅರ್ಜಿ ಆಹ್ವಾನಿಸಿದೆ.ಒಂದು ವರ್ಷದ ಅವಧಿಯ ಮೆಡಿಕಲ್ ಲ್ಯಾಬ್ ಅಸಿಸ್ಟೆಂಟ್, ಕಂಪ್ಯೂಟರ್ ಅಪ್ಲಿಕೇಷನ್, ಹಾರ್ಡ್ವೇರ್ ಅಂಡ್ ನೆಟ್ವರ್ಕಿಂಗ್, ಡಿಟಿಪಿ, ಆಫೀಸ್ ಆಟೋಮೇಶನ್, ಬ್ಯೂಟಿ ಪಾರ್ಲರ್, ಟೈಲರಿಂಗ್, ಫ್ಯಾಷನ್ ಡಿಸೈನಿಂಗ್ ಮುಂತಾದ ವಿವಿಧ ವೃತ್ತಿ ತರಬೇತಿಗಳಿಗಾಗಿ ಪ್ರವೇಶ ಪ್ರಾರಂಭವಾಗಿದೆ. ಆಸಕ್ತರು ಐವಾನ್-ಇ-ಶಾಹಿ ಅತಿಥಿ ಗೃಹದ ಮುಂದಿರುವ ಕಮ್ಯುನಿಟಿ ಕಾಲೇಜಿನಲ್ಲಿ ಸಂಪರ್ಕಿಸಲು ಕೋರಲಾಗಿದೆ. ಅರ್ಜಿ ಸ್ವೀಕರಿಸುವ ಕೊನೆಯ ದಿನ ಜೂ. 25.
ಅಂಬೇಡ್ಕರ್ ದಲಿತರ ಆಶಾಕಿರಣ
ಸುರಪುರ: ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ತಮ್ಮ ಜೀವಿತದ ಅವಧಿಯವರೆಗೂ ದೀನ ದಲಿತರ ಹಾಗೂ ತುಳಿತಕ್ಕೆ ಒಳಪಟ್ಟವರ ಶ್ರೇಯಸ್ಸಿಗಾಗಿ ಹಗಲಿರಳು ಶ್ರಮಿಸಿದರು. ಅವರ ಹೋರಾಟದ ಫಲವೇ ಇಂದು ದಲಿತರು ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಿದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ. ಎಚ್.ಟಿ. ಪೋತೆ ಹೇಳಿದರು. ತಾಲೂಕಿನ ದೇವರಗೋನಾಲ ಗ್ರಾಮದಲ್ಲಿ ಅಂಬೇಡ್ಕರ್ ಯುವಕ ಸಂಘ ಆಯೋಜಿಸಿದ್ದ ಡಾ. ಅಂಬೇಡ್ಕರರ 122ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರರು ಹಾಕಿಕೊಟ್ಟ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ದಿವ್ಯ ಮಂತ್ರವನ್ನು ಅನುಸರಿಸಬೇಕೆಂದು ಕರೆ ನೀಡಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.