ಸಂಚಾರಿ ಪೀಠಗಳ ಕಾಯಮಾತಿಗೆ ಸ್ವಾಗತ
ಗುಲ್ಬರ್ಗ: ಉತ್ತರ ಕರ್ನಾಟಕದ ಎರಡು ಪ್ರಮುಖ ಉಚ್ಛನ್ಯಾಯಾಲಯದ ಸಂಚಾರಿ ಪೀಠಗಳನ್ನು ಕಾಯಂ ಪೀಠಗಳನ್ನಾಗಿ ಪರಿವರ್ತಿಸಲು ನಿರ್ಧರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಕೆಜೆಪಿ ಯುವ ಘಟಕ ರಾಜ್ಯ ಕಾರ್ಯದರ್ಶಿ ಶರಣು ಪಾಟೀಲ್ ಮೋತಕಪಳ್ಳಿ ಸ್ವಾಗತಾರ್ಹ ಎಂದು ತಿಳಿಸಿದ್ದಾರೆ.
ಸಂಚಾರಿ ಪೀಠಗಳಾಗಿ ಕಾರ್ಯನಿರ್ವಹಿಸಿದ ಗುಲ್ಬರ್ಗ ಹಾಗೂ ಧಾರವಾಡ ಉಚ್ಛನ್ಯಾಯಾಲಯಗಳು ಕಾಯಂ ಪೀಠಗಳನ್ನಾಗಿ ಪರಿವರ್ತಿಸಲು ನಿರ್ಧರಿಸಿರುವುದು ಎಲ್ಲ ವಕೀಲರಿಗೆ ಹರ್ಷವನ್ನುಂಟು ಮಾಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದಶಕಗಳ ಕಾಲ ಈ ಭಾಗದ ವಕೀಲರು ನಡೆಸಿದ ಹೋರಾಟಕ್ಕೆ ನಿಜವಾದ ಗೆಲವು ಸಿಕ್ಕಿದೆ. ಈ ಭಾಗದ ಜನರಿಗೆ ತ್ವರಿತ ಹಾಗೂ ಕಡಿಮೆ ಖರ್ಚಿನಲ್ಲಿ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳುವ ಅವಕಾಶ ಕಲ್ಪಿಸಿಕೊಟ್ಟಂತಹ ಕೇಂದ್ರದ ಎಲ್ಲ ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
--