ಸಾಹಿತ್ಯ ಸಮ್ಮೇಳನ ಲಾಂಛನ ಬಿಡುಗಡೆ
ಗುಲ್ಬರ್ಗ: ಜೂ. 15ರಂದು ಆರಂಭವಾಗುವ ಜಿಲ್ಲಾ 13ನೇ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಸಮಾರಂಭ ಗುರುವಾರ ನಗರದ ಕನ್ನಡ ಭವನದಲ್ಲಿ ನಡೆಯಿತು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಲಾಂ:ನ ಬಿಡುಗಡೆಗೊಳಿಸಿದರು.
ಸಮಾರಂಭದಲ್ಲಿ ಅಪ್ಪಾರಾವ ಅಕ್ಕೋಣಿ, ಡಾ. ಸ್ವಾಮಿರಾವ ಕುಲಕರ್ಣಿ, ವಜ್ರಕುಮಾರ ಕಿವಡೆ, ಡಾ. ಶ್ರೀಶೈಲ್ ನಾಗರಾಳ, ಡಾ. ಕಾಶಿನಾಥ ಅಂಬಲಗಿ, ಪಿ. ಎಂ. ಮಣೂರ, ಗವೀಶ ಹಿರೇಮಠ, ರಾಜೇಂದ್ರ ಯರನಾಳೆ, ಚಿ. ಸಿ. ಲಿಂಗಣ್ಣ, ಅಪ್ಪಾರಾವ ಕುಲಕರ್ಣಿ, ಡಾ. ಎಚ್. ಟಿ. ಪೋತೆ, ಬಿ. ಎಚ್. ನಿರಗುಡಿ, ಸುರೇಶ ಬಡಿಗೇರ ಇತರರು ಉಪಸ್ಥಿತರಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.