ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಂದಿನಿಂದ ವಿವಿಧೆಡೆ ಶಿವಾನುಭವ ಗೋಷ್ಠಿ

Mainashree
Updated On : 8 Jun 2013, 11:57 am

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಜೂ.7
ಯಾದಗಿರಿ ಜಿಲ್ಲೆಯ ಅಬ್ಬೆತುಮಕೂರಿನಲ್ಲಿ 334ನೇ ಶಿವಾನುಭವ ಚಿಂತನಾಗೋಷ್ಠಿಯನ್ನು ಜೂ.8ರಂದು ವಿಶ್ವರಾಧ್ಯ ಮಠದಲ್ಲಿ ರಾತ್ರಿ 8.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಮಠದ ಪೀಠಾಧಿಪತಿ ಗಂಗಾಧರ ಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ಸಗರನಾಡಿನ ಸ್ವಾಮೀಜಿ ಧಾರ್ಮಿಕ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ.
ಶಿವಾನುಭವ ಚಿಂತನೆಯ ನಂತರ ರಾತ್ರಿಯಿಡೀ ವಚನ ಗಾಯನ, ಸಂಗೀತ ಸಭೆ ಜರುಗಲಿದೆ. ಸುತ್ತಮುತ್ತಲಿನ ಗ್ರಾಮದ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯುವುದು ಎಂದು ನಗರ ಘಟಕ ವಿಶ್ವರಾಧ್ಯ ಸೇವಾ ಸಮಿತಿಯ ವಕ್ತಾರ ಹಾಗೂ ಸಂಘಟನಾ ಕಾರ್ಯದರ್ಶಿ ಬಸವರಾಜ ಶೀಲವಂತ ತಿಳಿಸಿದ್ದಾರೆ.
ವಿಶ್ವರಾಧ್ಯ ತಪೋವನ ಮಠದಲ್ಲಿ: ಜೇವರ್ಗಿ ತಾಲೂಕಿನ ಶಾಖಾಪುರದ ವಿಶ್ವರಾಧ್ಯ ತಪೋವನ ಮಠದಲ್ಲಿ 224 ನೇ ಶಿವಾನುಭವ ಚಿಂತನೆಯು ಜೂ. 8 ರಂದು ರಾತ್ರಿ ಗಂಟೆಗೆ ಜರುಗುವುದು. ಚಿಂತನೆಯ ನೇತೃತ್ವ ಮಠದ ಪೀಠಾಧಿಪತಿ ಸಿದ್ದರಾಮ ಶಿವಾಚಾರ್ಯ ವಹಿಸುವರು. ನಾಡಿನ ಖ್ಯಾತ ಗಣ್ಯವಕ್ತಿಗಳಿಂದ, ಸ್ವಾಮೀಜಿಯಿಂದ ಪ್ರವಚನ ಕಾರ್ಯಕ್ರಮ ನಡೆಯುವುದು. ಶಿವಾನುಭವ ಚಿಂತನೆಯ ನಂತರ ರಾತ್ರಿ ವಚನ ಗಾಯನ, ಸಂಗೀತ ಸಭೆ ಜರುಗಲಿದೆ. ಸುತ್ತಮುತ್ತಲಿನ ಗ್ರಾಮದ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯುವುದು.
ಶ್ರೀನಿವಾಸ ಸರಡಗಿ: ಗುಲ್ಬರ್ಗ ತಾಲೂಕಿನ ಶ್ರೀನಿವಾಸ ಸರಡಗಿಯಲ್ಲಿ 171ನೇ ಶಿವಾನುಭವ ಕಾರ್ಯಕ್ರಮವು ಚಿಕ್ಕ ವೀರೇಶ್ವ ಹಿರೇಮಠದಲ್ಲಿ ಜೂ.8ರಂದು ರಾತ್ರಿ 8ಕ್ಕೆ ಹಮ್ಮಿಕೊಳ್ಳಲಾಗಿದೆ. ಮಠದ ಮಠಾಧೀಶ ರೇವಣಸಿದ್ದ ಶಿವಾಚಾರ್ಯರು ನೇತೃತ್ವ ವಹಿಸುವರು. ಶಿವಾನುಭವ ಚಿಂತನೆಯ ನಂತರ  ವಚನ ಗಾಯನ, ಸಂಗೀತ ಸಭೆ ಜರುಗಲಿದೆ. ಸುತ್ತಮುತ್ತಲಿನ ಗ್ರಾಮದ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯುವುದು.
ಅಪ್ಪನ ಶಾಖಾಪುರದ ಮಠದಲ್ಲಿ: ಶಹಾಪುರ ತಾಲೂಕಿನ ಅಪ್ಪನ ಶಾಖಾಪುರದ ಮಠದಲ್ಲಿ ಜೂ.13 ರಂದು ರಾತ್ರಿ 8.50 ಗಂಟೆಗೆ ಶಿವಾನುಭವಯ ಗೋಷ್ಠಿ ಚಿಂತನೆಯ ಜರುಗಲಿದೆ. ಅಬ್ಬೆತುಮಕೂರಿನ ಸಿದ್ಧ ಸಂಸ್ಥಾನ ಮಠದ ಪೀಠಾಧಿಪತಿ  ಗಂಗಾಧರ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು.
ಶಿವಾನುಭವ ಚಿಂತನೆಯ ನಂತರ ರಾತ್ರಿ ವಚನ ಗಾಯನ, ಸಂಗೀತ ಸಭೆ ಜರುಗಲಿದೆ. ಸುತ್ತಮುತ್ತಲಿನ ಗ್ರಾಮದ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯುವುದು.  ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಬೇಕು ಎಂದು ಪ್ರಕಟಣೆ ಮೂಲಕ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement