ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕನ್ನಡಪ್ರಭ ವಾರ್ತೆ ಚಿಂಚೋಳಿ ಜೂ.7

Mainashree
Updated On : 8 Jun 2013, 11:58 am

ಗುಲ್ಬರ್ಗ ಮತ್ತು ಧಾರವಾಡಕ್ಕೆ ಸಂಚಾರಿ ಹೈಕೋರ್ಟ್ ಪೀಠಗಳನ್ನು ಕಾಯಂ ಮಾಡಬೇಕೆಂಬ ಬಹುದಿನಗಳ ಬೇಡಿಕೆಗೆ ಈಡೇರಿಸಿದ್ದಕ್ಕಾಗಿ ಪಟ್ಟಣದ ನ್ಯಾಯಾಲಯದ ನ್ಯಾಯವಾದಿಗಳು ಪಟಾಕಿ ಸಿಡಿಸಿ, ಸಿಹಿ ತಿಂಡಿ ಹಂಚಿಕೊಂಡು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.
ಹಿರಿಯ ನ್ಯಾಯವಾದಿ ಸಿ.ವಿ. ದೇಶಮುಖ ಮಾತನಾಡಿ, ಹಲವು ದಶಕಗಳಿಂದ ವಕೀಲರು ಮತ್ತು ಹೈ.ಕ.ಪ್ರದೇಶದ ಸಾರ್ವಜನಿಕರು ನಡೆಸಿದ ಹೋರಾಟದ ಫಲವಾಗಿ ನಮ್ಮ ಕನಸು ನನಸಾಗಿದೆ. ಹೈಕೋರ್ಟ್‌ನಲ್ಲಿ ಕಕ್ಷಿದಾರರಿಗೆ ಮೇಲ್ಮನವಿ ಸಲ್ಲಿಸಬೇಕಾದರೆ ಬೆಂಗಳೂರಿಗೆ ಹೋಗಬೇಕಾಗುತ್ತಿತ್ತು. ಗುಲ್ಬರ್ಗ ಸಂಚಾರಿ ಪೀಠ ಸ್ಥಾಪನೆಗೆ ಬೆಂಗಳೂರಿನ ವಕೀಲರು ಅನೇಕ ಸಲ ವಿರೋಧ ವ್ಯಕ್ತಪಡಿಸಿದರೂ, ಸಹ ಕೇಂದ್ರ ಸರ್ಕಾರ ಮಹತ್ವದ ನಿರ್ಣಯ ಕೈಕೊಳ್ಳುವ ಮೂಲಕ ಹಿಂದುಳಿದ ಪ್ರದೇಶಕ್ಕೆ ನ್ಯಾಯ ನೀಡಿದೆ ಎಂದರು.
ಸಂತಸ: ಕಾಂಗ್ರೆಸ್ ಯುವ ಮುಖಂಡ ಕೆ.ಎಂ. ಬಾರಿ ಮಾತನಾಡಿ, ಸೋನಿಯಾಗಾಂಧಿ, ಪ್ರಧಾನಮಂತ್ರಿ ಡಾ. ಮನಮೋಹನಸಿಂಗ್, ಕೇಂದ್ರ ಕಾರ್ಮಿಕ ಮಂತ್ರಿ ಮಲ್ಲಿಕಾರ್ಜುನ ಖರ್ಗೆ, ಸಂಸದ ಧರ್ಮಸಿಂಗ್ ಹಿಂದುಳಿದ ಪ್ರದೇಶ ಕಕ್ಷಿದಾರರಿಗೆ ಅನುಕೂಲವಾಗಲೆಂದು ಗುಲ್ಬರ್ಗ ಮತ್ತು ಧಾರವಾಡಕ್ಕೆ ಸಂಚಾರಿ  ಹೈಕೋರ್ಟ್ ಪೀಠಗಳನ್ನು ಕಾಯಂಗೊಳಿಸಿದ್ದು ಸಂತಸವಾಗಿದೆ ಎಂದರು.
ಹಿರಿಯ ವಕೀಲ ಶಿವಶರಣಪ್ಪ ಜಾಪಟ್ಟಿ, ನ್ಯಾಯವಾದಿಗಳಾದ ಬಸವರಾಜ ಗಿರಿ, ವಿಶ್ವನಾಥ ಬೆನಕಿನ್, ಮಾಣಿಕರಾವ್ ಗುಲಗುಂಜಿ, ಶಂಕರ ರಾಠೋಡ, ಮಾಣಿಕರಾವ ಗುಲಗುಂಜಿ, ಬಸವರಾಜ ಠಾಕೂರ, ರಾಜೇಂದ್ರ ವರ್ಮಾ, ಸುಭಾಷ ಕಳಸ್ಕರ್, ಜಗನ್ನಾಥ ಅಗ್ನಿಹೋತ್ರಿ, ವಿಜಯಕುಮಾರ ರಾಠೋಡ, ವಸಂತಕುಮಾರ ರಾಠೋಡ, ನೀಲಕಂಠ ರಾಠೋಡ, ಶೆಟ್ಟಿ ಜಾಧವ, ಹಣಮಂತ ಹಿರೇಮನಿ, ಗುಂಡಪ್ಪ ಗೋಖಲೆ, ಮಲ್ಲಿಕಾರ್ಜುನ ಸುಂಕದ, ಪಪಂ ಸದಸ್ಯರಾದ ಅಬ್ದುಲ್ ಬಾಸೀತ, ರಾಮಶೆಟ್ಟಿ ಪವಾರ, ಕೃಷಿಕ ಸಮಾಜ ಅಧ್ಯಕ್ಷ ಮಲ್ಲಿಕಾರ್ಜುನ ಭೂಶೆಟ್ಟಿ, ಸಂಗಯ್ಯ ಸ್ವಾಮಿ ಇತರರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement