ಕಾಖಂಡಕಿಯಲ್ಲಿ ನಾಳೆ ರಥೋತ್ಸವ
ಗುಲ್ಬರ್ಗ/ಶಹಾಬಾದ್: ಜೇವರ್ಗಿ ತಾಲೂಕಿನ ಕಾಖಂಡಕಿಯಲ್ಲಿ ಗುರು ಮಲ್ಹಾರಾಧ್ಯರ, ಕೋರಿ ಸಿದ್ದೇಶ್ವರರ ಜಾತ್ರಾ ಮಹೋತ್ಸವ ನಿಮಿತ್ತ ಜೂ.8,9ರಂದು ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ನಾಲವಾರ ಮಠದ ಮಹಾದೇವ ಗವ್ಹಾರ, ಸೋಮಶೇಖರ ಎಸ್. ಲಾಡ್ಲಾಪುರ ತಿಳಿಸಿದ್ದಾರೆ.
ನಾಲವಾರದ ಕೋರಿ ಸಿದ್ದೇಶ್ವರ ಸಂಸ್ಥಾನ ಮಠದ ಡಾ. ಸಿದ್ದ ತೋಟೇಂದ್ರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ನಡೆಯುವ ಜಾತ್ರಾ ಮಹೋತ್ಸವ ನಿಮಿತ್ತ ಮೇ.30ರಿಂದ ಜೂ.9ರವರೆಗೆ ರಾತ್ರಿ 8 ಗಂಟೆಗೆ ಪುರಾಣ ಪ್ರವಚನ ನಡೆಯುತ್ತಿದ್ದು, ಜೂ.8ರಂದು ರಾತ್ರಿ 8 ಗಂಟೆಗೆ ಶಿವಾನುಭವ ಚಿಂತನೆ, ಮಧ್ಯರಾತ್ರಿ ಭಕ್ತರ ಭಕ್ತಿಯ ತನಾರತಿ ಉತ್ಸವ ನಡೆಯುವುದು. ಜೂ.9ರಂದು 501 ಜನ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ, ಸಂಜೆ 6ಕ್ಕೆ ಭವ್ಯ ರಥೋತ್ಸವ ಜರುಗುವುದು. ಜೂ.10ರಂದು ಬೆಳಗ್ಗೆ ಕುಸ್ತಿ ಪಂದ್ಯ ನಡೆಯುವುದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.