ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕ್ಷೇತ್ರದ ಅಭಿವೃದ್ಧಿಗೆ ಬದ್ಧ: ಅಜಯಸಿಂಗ್

Mainashree
Updated On : 8 Jun 2013, 11:58 am

ಕನ್ನಡಪ್ರಭ ವಾರ್ತೆ  ಜೇವರ್ಗಿ  ಜೂ.7
ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ನಾನು ಕಂಕಣಬದ್ಧನಾಗಿದ್ದು, ಆ ನಿಟ್ಟಿನಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ವಿವಿಧ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ನೂತನ ಶಾಸಕ ಡಾ. ಅಜಯಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕ ಪಂಚಾಯತಿಯ ಸಭಾಂಗಣದಲ್ಲಿ ಇತ್ತೀಚೆಗೆ ತಾಲೂಕು ಪಡಿತರ ವಿತರಕರ ಸಂಘ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕ್ಷೇತ್ರದ ಜನತೆ ತಮಗೆ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತಪಡಿಸಿದ್ದು, ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ನನ್ನನ್ನು ಚುನಾಯಿಸಿ ಕಳುಹಿಸಿದ್ದೀರಿ. ಕ್ಷೇತ್ರದ ಜನರ ವಿಶ್ವಾಸ ಉಳಿಸಿಕೊಂಡು ಹೋಗುವುದಾಗಿ ಹೇಳಿದರು.
ಸಮಸ್ಯೆಗಳಿಗೆ ನಿರಂತರ ಸ್ಪಂದನೆ: ಪಡಿತರ ವಿತರಣೆ ಸೇರಿದಂತೆ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಜನಸಾಮಾನ್ಯರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುವುದಾಗಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಆಹಾರ ನಿರೀಕ್ಷಕ ಡಿ.ಬಿ. ಪಾಟೀಲ್, ಹುಸೇನಪಾಷಾ ನಮಾಜಿ, ಚನ್ನಬಸಪ್ಪ ಬಳ್ಳುಂಡಗಿ, ಪ್ರಭಾಕರ ರಬಶೆಟ್ಟಿ, ಬಹಾದ್ದೂರ ರಾಠೋಡ, ಶಿವಕುಮಾರ ಬಿದರಿ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಶರಣಬಸಪ್ಪ ರ್ಯಾವನೂರ, ಶಿರಸ್ತೇದಾರ ಶಿವಶರಣಪ್ಪ ದಿವಟಗಿ, ದೊಡ್ಡಪ್ಪಗೌಡ ಪಾಟೀಲ್ ಹುಲ್ಲೂರ, ಅಯ್ಯಪ್ಪ ಮಾನ್ಸುಣಗಿ, ಶಿವಶರಣಪ್ಪ ಅಂಕಲಗಿ, ಕರಣಪ್ಪಗೌಡ ಕೆಲ್ಲೂರ, ಹಣಮಂತ ವಡಗೇರಾ ಸೇರಿದಂತೆ ತಾಲೂಕಿನ ವಿವಿಧ ನ್ಯಾಯಬೆಲೆ ಅಂಗಡಿ ಡೀಲರಗಳು ಪಾಲ್ಗೊಂಡಿದ್ದರು.
ಪಡಿತರ ವಿತರಕರ ಸಂಘದ ತಾಲೂಕು ಅಧ್ಯಕ್ಷ ಜಗದೀಶ ಪಡಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಹಿಬೂಬ್ ಪಟೇಲ್ ಕೋಬಾಳ ಸ್ವಾಗತಿಸಿದರು. ಬಸವರಾಜ ಹೂಗಾರ ಯಡ್ರಾಮಿ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement