ಎಪಿಎಂಸಿಗೆ ಅಡತ ವ್ಯಾಪಾರ ಸ್ಥಳಾಂತರಿಸಿ
ಗುಲ್ಬರ್ಗ/ಶಹಾಬಾದ್: ಶಹಾಬಾದ್ ನಗರದ ಜೆಸ್ಕಾಂ ಕಚೇರಿ ಬಳಿಯಲ್ಲಿ ಇರುವ ಎಪಿಎಂಸಿ ಕಚೇರಿಯ ಆವರಣದಲ್ಲಿರುವ ನಿವೇಶನಗಳಿಗೆ ನಗರದ ಎಲ್ಲ ಅಡತ ವ್ಯಾಪಾರವನ್ನು ಶೀಘ್ರದಲ್ಲಿ ಸ್ಥಳಾಂತರಿಸಬೇಕು ಎಂದು ಎಪಿಎಂಸಿ ಅಧ್ಯಕ್ಷ ಶಿವಯೋಗಿ ಸಾಹು ಗುಂಡಗುರ್ತಿ ಆದೇಶಿಸಿದ್ದಾರೆ.
ಅವರು ಶುಕ್ರವಾರ ನಗರದ ಎಪಿಎಂಸಿ ಕಚೇರಿಗೆ ಭೇಟಿ ನೀಡಿ ಸ್ಥಳೀಯ ಅಡತ ವ್ಯಾಪಾರಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡುತ್ತ, ಇಲ್ಲಿ ಒಟ್ಟು 22 ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದು, ಅವುಗಳನ್ನು ನಿಗದಿ ನಿವೇಶನದಲ್ಲಿ ಪ್ರಾರಂಭಿಸಬೇಕೆಂದು ಸಲಹೆ ನೀಡಿದರು.
ಅಡತ ವ್ಯಾಪಾರಸ್ಥರ ಪರವಾಗಿ ಶರಣಬಸಪ್ಪ ಕೋಬಾಳ, ಶಿವುಕುಮಾರ ಇಂಗಿನಶಟ್ಟಿ ಸನ್ಮಾನಿಸಿದರು. ನಗರದ ಅಡತ ವ್ಯಾಪಾರಸ್ಥರಾದ ಸಂತೋಷಕುಮಾರ ಇಂಗಿನಶೆಟ್ಟಿ, ಚಂದ್ರಕಾಂತ ದಸ್ತಾಪುರ, ಶರಣು ಬಿರಾಳ, ಬಾಬುರಾವ ಪಂಚಾಳ, ಶಂಕರ ಸೂಗೂರ, ಭೀಮರಾವ ಮೇಟಿ, ಭೀಮಣ್ಣ ಅಪ್ಲೆ, ಪಿಂಟೂ ಕುಂಬಾರ, ಹೊಸ್ಮನಿ, ಶರಣು ಜೇರಟಗಿ ಇತರರು ಪಾಲ್ಗೊಂಡಿದ್ದರು.