ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಗಲ್ಲದಿಂದ ತೆಗೆದ 3 ಸಾವಿರ ಮೊಳ ಹಗ್ಗ

Mainashree
Updated On : 9 Jun 2013, 11:45 am

ಗುಲ್ಬರ್ಗ/ಶಹಾಬಾದ್: ದೇವರಿಗೆ ಭಕ್ತರು ಹರಕೆ ಹೊರುವುದು ಸಾಮಾನ್ಯ. ಆದರೆ, ಶಹಾಬಾದನ ಶರಣಯ್ಯ ಸ್ವಾಮಿ ಮಠಪತಿ ಸೇಡಂ ಅವರು ತಮ್ಮ ಆರಾಧ್ಯ ದೈವ ರೇವಣಸಿದ್ದೇಶ್ವರರ ಹೆಸರಿನಲ್ಲಿ 3001 ಮೊಳ ಉದ್ದದ ಹಗ್ಗವನ್ನು ತಮ್ಮ ಗಲ್ಲದಿಂದ ತೊರಿಸಿ ಭಕ್ತಿಯ ಪರಕಾಷ್ಠೆ ಮೆರೆದಿದ್ದಾರೆ.
 ಚಿತ್ತಾಪುರ ತಾಲೂಕಿನ ಬಾಗೋಡಿ ಗ್ರಾಮದ ರೇವಣಸಿದ್ದೇಶ್ವರ ಮಠದಲ್ಲಿ ಬಾದಮಿ ಅಮವಾಸ್ಯೆ ನಿಮಿತ್ತ ರೇವಣಸಿದ್ದೇಶ್ವರರ ಮೂರ್ತಿಯನ್ನು ಬೆಳಗ್ಗೆ ವಾದ್ಯ ಭಜನೆಯೊಂದಿಗೆ ಗಂಗಾ ಸ್ನಾನಕ್ಕೆ ಕಾಗಿಣಾ ನದಿಗೆ ಪಲ್ಲಕ್ಕಿಯಲ್ಲಿ ಕರೆದುಕೊಂಡು ಹೋಗಲಾಯಿತು.
ಗಂಗಾ ಸ್ನಾನದ ನಂತರ ಪುರವಂತರ ಸೇವೆಯೊಂದಿಗೆ ಮಧ್ಯಾಹ್ನ ಮಠಕ್ಕೆ ಬರಲಾಯಿತು. ಪುರವಂತರರು ನಾಲ್ಕು ಅಡಿಯ ಕಿರುಬೆರಳು ಗಾತ್ರದ ಹಿತ್ತಾಳೆ ಸಳಾಕೆಗೆ 3001 ಮೊಳ ಉದ್ದದ ಹಗ್ಗವನ್ನು ಜೋಡಿಸಿ ಶರಣಯ್ಯರ ಬಾಯಿಯ ಒಳಗಿನಿಂದ ಬಲ ಭಾಗದ ಗಲ್ಲಕ್ಕೆ ಚುಚ್ಚಿ, ಗಲ್ಲದ ಮೂಲಕ ಹೊರಗೆ ಎಳೆಯಲಾಯಿತು. ನಂತರ ಭಕ್ತರ ಜಯಘೋಷದೊಂದಿಗೆ ಗಲ್ಲದಿಂದ ಹಗ್ಗವನ್ನು ಎಳೆದು ಕತೃ ಗದ್ದುಗೆಯವರೆಗೆ ಹಗ್ಗವನ್ನು ಎಳೆಯಲಾಯಿತು.
ಇಂಥ ವಿಶಿಷ್ಟ ಭಕ್ತಿಯ ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ಶರಣಗೌಡ, ಗ್ರಾಪಂ ಸದಸ್ಯ ಶಿವರಾಜ ಪಾಟೀಲ್, ಮಠದ ಅಧ್ಯಕ್ಷ ರೇವಣಸಿದ್ದಪ್ಪ ಪಾಟೀಲ್, ಮಲ್ಲಣ್ಣ ಹಸಬಾ, ನಾಗಣ್ಣ ಕಲಶೆಟ್ಟಿ, ರೇವಣಸಿದ್ದ ಕಲಶೆಟ್ಟಿ, ಶಿವಕುಮಾರ ಸ್ವಾಮಿ ಟೆಂಗಳಿ, ಸಿದ್ದಯ್ಯ ಸ್ವಾಮಿ ಸೇಡಂ, ಪರಮೇಶ್ವರ ಕಲಬುರ್ಗಿ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡರು. ನಂತರ ಕತೃ ಗದ್ದುಗೆಗೆ ಪೂಜೆ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement