'ಬಡಮಕ್ಕಳಿಗೆ ಪ್ರೋತ್ಸಾಹಿಸಿ'
ಸುರಪುರ: ಪಟ್ಟಣ ಪ್ರದೇಶದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿ ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಅವರನ್ನು ಪ್ರೋತ್ಸಾಹಿಸಿದರೆ ಉತ್ತಮ ಪ್ರತಿಭೆ ತೋರುತ್ತಾರೆ. ಕಾರಣ ಬಡ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹಧನ ನೀಡಿ ಪುರಸ್ಕರಿಸುವುದು ಅವಶ್ಯ ಎಂದು ತಾಲೂಕಿನ ಲಕ್ಷ್ಮೀಪುರ ಗ್ರಾಮದ ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಚಂದ್ರಶೇಖರ ಡೋಣೂರ ಹೇಳಿದರು.
ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಎಸ್ಎಸ್ಎಲ್ಸಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಸುರೇಶ ಸಜ್ಜನ ವೈಯಕ್ತಿಕವಾಗಿ ನೀಡಿದ್ದ ತಲಾ 5 ಸಾವಿರ ನಗದು ಧನ ಸಹಾಯವನ್ನು ವಿತರಿಸಿ ಮಾತನಾಡಿದರು. ಈ ಹಿಂದೆ ಗ್ರಾಮದ ಬಡ ವಿದ್ಯಾರ್ಥಿಗಳಿಗೆ ಮಾಜಿ ಸಚಿವ ರಾಜುಗೌಡ ಮತ್ತು ಸುರೇಶ ಸಜ್ಜನ ಇದೇ ರೀತಿ ಧನ ಸಹಾಯ ನೀಡಿದ್ದರು. ಅವರ ಸಹಾಯ ಪಡೆದ ವಿದ್ಯಾರ್ಥಿ ಇಂದು ಎಂಜಿನಿಯರ್ ಪದವಿಯಲ್ಲಿದ್ದಾನೆ.ಎಂದರು. ಈ ವೇಳೆ ಬಡ ಪ್ರತಿಭಾವಂತ ವಿದ್ಯಾರ್ಥಿಗಳಾದ ಮಹೇಶ ಮತ್ತು ಶ್ರೀಧರ ಅವರಿಗೆ ಸಜ್ಜನ ನೀಡಿದ್ದ ತಲಾ 5 ಸಾವಿರ ಸಹಾಯ ಧನವನ್ನು ನೀಡಲಾಯಿತು.