ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ರಿಯಾಯ್ತಿ ದರದ ಬಿತ್ತನೆ ಬೀಜ ಮಾರಾಟ

Mainashree
Updated On : 9 Jun 2013, 11:45 am

ಕನ್ನಡಪ್ರಭ ವಾರ್ತೆ  ಚಿತ್ತಾಪುರ  ಜೂ.8
ರೈತ ಸಂಪರ್ಕ ಕೇಂದ್ರಗಳ ಮೂಲಕ ಬಿತ್ತನೆ ಬೀಜಗಳು ರಿಯಾಯತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಎಸ್.ಎಸ್. ಕನಕ ತಿಳಿಸಿದ್ದಾರೆ.
ತಾಲೂಕಿನಲ್ಲಿ ಚಿತ್ತಾಪುರ, ಕಾಳಗಿ ನಾಲವಾರ, ಶಾಹಾಬಾದ್,  ಮಾಡಬೂಳ, ಅಳ್ಳಳ್ಳಿ ಸೇರಿದಂತೆ 6 ರೈತ ಸಂಪರ್ಕ ಕೇಂದ್ರಗಳಿವೆ. ಒಂದು ಕೇಂದ್ರಕ್ಕೆ ಸುಮಾರು 30 ಹಳ್ಳಿಗಳು ಒಳಗೊಂಡಿವೆ. ಆಯಾ ಭಾಗದ ಕೀಟನಾಶಕ, ಯಂತ್ರಗಳ ವಿತರಣೆ ಕೇಂದ್ರಗಳ ಮೂಲಕ ಮಾಡಲಾಗುತ್ತದೆ.
ಬಿತ್ತನೆ ಗುರಿ: ತಾಲೂಕಿನ ಮುಂಗಾರು ಬಿತ್ತನೆ 7740 ಹೆಕ್ಟೇರ್ ಗುರಿ ಹೊಂದಲಾಗಿದೆ. ತೊಗರಿ 55 ಸಾವಿರ ಹೆಕ್ಟೇರ್, ಉದ್ದು 10 ಸಾವಿರ ಹೆಕ್ಟೇರ್, ಹೆಸರು 9 ಸಾವಿರ ಹೆಕ್ಟೇರ್, ಸೂರ್ಯಕಾಂತಿ 1 ಸಾವಿರ ಹೆಕ್ಟೇರ್, ಶೇಂಗಾ 1 ಸಾವಿರ ಹೆಕ್ಟೇರ್, ಸಜ್ಜೆ 1700 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹಮ್ಮಿಕೊಳ್ಳಲಾಗಿದೆ. ಬೀಜ ದಾಸ್ತಾನು,  ಮಾಡಬೂಳ ರೈತ ಕೇಂದ್ರದಲ್ಲಿ ಹೆಸರು 1.80 ಕ್ವಿಂಟಲ್, ಉದ್ದು 450 ಕ್ವಿಂಟಲ್,  ತೊಗರಿ 1800 ಕ್ವಿಂಟಲ್,  ಸೋಯಾಬಿನ್ 50 ಕ್ವಿಂಟಲ್.
ಶಹಾಬಾದ್ ರೈತ ಕೇಂದ್ರದಲ್ಲಿ ಹೆಸರು 1.80, ಉದ್ದು 1,80, ತೊಗರಿ 13.50 ಕ್ವಿಟಲ್,  ಭತ್ತ 10 ಕ್ಚಿಂಟಲ್. ಚಿತ್ತಾಪುರ ಕೇಂದ್ರದಲ್ಲಿ ಹೆಸರು 1.80 ಕ್ವಿಂಟಲ್, ತೊಗರಿ 9 ಕ್ವಿಂಟಲ್, ಉದ್ದು 4.50 ಕ್ವಿಂಟಲ್,  ಭತ್ತ 20 ಕ್ವಿಂಟಲ್. ನಾಲವಾರ ರೈತ ಕೇಂದ್ರದಲ್ಲಿ ಹೆಸರು 1,80 ಕ್ವಿಂಟಲ್, ಉದ್ದು 1,50 ಕ್ವಿಂಟಲ್, ತೊಗರಿ 9 ಕ್ವಿಂಟಲ್, ಭತ್ತ 40 ಕ್ವಿಂಟಲ್.  ಕಾಳಗಿ ರೈತ ಕೇಂದ್ರದಲ್ಲಿ ಹೆಸರು 1.80 ಕ್ವಿಂಟಲ್, ತೊಗರಿ 18 ಕ್ವಿಂಟಲ್, ಉದ್ದು 15 ಕ್ವಿಂಟಲ್,  ಹೈಬ್ರಡ್ ಜವಾರಿ ಜೋಳ 9 ಕ್ವಿಂಟಲ್, ಸೋಯಾಬಿನ್ 122 ಕ್ವಿಂಟಲ್ ಬೀಜಗಳನ್ನು ದಾಸ್ತಾನು ಮಾಡಲಾಗಿದೆ.
ಗೊಬ್ಬರ ದಾಸ್ತಾನು: ತಾಲೂಕಿನ 15 ವಿಎಸ್‌ಎಸ್‌ಎನ್ ಕೇಂದ್ರಗಳಿಗೆ  2529 ಟನ್ ಗೊಬ್ಬರ ಖರೀದಿ ಮಾಡಲು ಮಂಜುರಾತಿ ನೀಡಲಾಗಿದೆ. ರೈತರು ವಿಎಸ್‌ಎಸ್‌ಎನ್ ಮೂಲಕ ಗೊಬ್ಬರ ಖರೀದಿ ಮಾಡಲು ಕೃಷಿ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. ಬಿತ್ತನೆಯಾಗುವಷ್ಟು ಮಳೆಯಾಗಿರುವುದಿಲ್ಲ. ಇದರಿಂದ ರೈತರು ಭೂಮಿ ಹದ ಮಾಡಿಕೊಂಡು ಬಿತ್ತನೆ ಬೀಜ ಗೊಬ್ಬರ ಖರೀದಿ ಮಾಡಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement