ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಿಕಲಚೇತನರ ವೈದ್ಯಕೀಯ ಮೌಲ್ಯಾಂಕನ ಶಿಬಿರ

Mainashree
Updated On : 9 Jun 2013, 11:44 am

ಗುಲ್ಬರ್ಗ/ಚಿತ್ತಾಪುರ: ಚಿತ್ತಾಪುರ ತಾಲೂಕು ಮಟ್ಟದ ವಿಶೇಷ ಅಗತ್ಯಯುಳ್ಳ ಅಂಗವಿಕರ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರವನ್ನು ಜೂ.11ರಂದು ಬಿಆರ್‌ಸಿ ಕೇಂದ್ರದ ಆವರಣದಲ್ಲಿ ಬೆಳಗ್ಗೆ 9 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಚವ್ಹಾಣ ಶೆಟ್ಟಿ ಹಾಗೂ  ಸರ್ವ ಶಿಕ್ಷಣ ಅಭಿಯಾನ ಕ್ಷೇತ್ರ ಸಮನ್ವಯ ಅಧಿಕಾರಿ ಸಿದ್ದವೀರಯ್ಯ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸರ್ವ ಶಿಕ್ಷಣ ಅಭಿಯಾನ ಗುಲ್ಬರ್ಗ ವತಿಯಿಂದ ಸಮನ್ವಯ ಶಿಕ್ಷಣದಡಿಯಲ್ಲಿ ಸೇಡಂ ಬ್ಲಾಕ್‌ನಲ್ಲಿ ಜೂನ್ 12ರಂದು ವಿಕಲಚೇತನ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ ಹಮ್ಮಿಕೊಳ್ಳಲಾಗಿದೆ.
ತಜ್ಞ ವೈದ್ಯರಿಂದ ತಪಾಸಣೆ ಮಾಡಿ ವಿಕಲತೆಗೆ ಅನುಸಾರವಾಗಿ ಸಾಧನ, ಸಲಕರಣೆಗೆ ಅಳತೆ ತೆಗೆದುಕೊಳ್ಳುವರು. ಆದ್ದರಿಂದ 6ರಿಂದ 14 ವಯೋವಾನದ ಮಕ್ಕಳು ಈ ಶಿಬಿರದಿಂದ ವಂಚಿತರಾಗದಂತೆ ಪಾಲಕ, ಪೋಷಕರು, ಶಿಕ್ಷಕರು, ಪಿಆರ್‌ಡಬ್ಲ್ಯು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ವೈದ್ಯಕೀಯ ಶಿಬಿರಕ್ಕೆ ಕರೆದುಕೊಂಡು ಬರಬೇಕೆಂದು ಸೇಡಂ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ. ಈ ಶಿಬಿರಕ್ಕೆ ಭಾಗವಹಿಸುವ ಮಗುವಿನ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ 3 ಪೋಟೊಗಳನ್ನು ತರಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement