ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಚಿವ ಚಿಂಚನಸೂರಗೆ ಕೋಲಿ ಸಮಾಜ ಸನ್ಮಾನ

Mainashree
Updated On : 9 Jun 2013, 11:45 am

ಕನ್ನಡಪ್ರಭ ವಾರ್ತೆ  ಯಾದಗಿರಿ  ಜೂ.8
 ಜವಳಿ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ ಅವರನ್ನು ಜಿಲ್ಲಾ ಟೋಕರಿ ಕೋಲಿ ಸಮಾಜದ ಪ್ರಮುಖರ ನಿಯೋಗ ವಿಧಾನಸೌಧದ ಸಚಿವರ ಕಚೇರಿಯಲ್ಲಿ ಸನ್ಮಾನಿಸಿತು.
ಸನ್ಮಾನ ಸ್ವೀಕರಿಸಿದ ಸಚಿವರು, ಇದು ನನ್ನ ತವರಿನ ಶುಭ ಹಾರೈಕೆ ಎಂದು ತಿಳಿಯುತ್ತಿದ್ದೇನೆ.
 ನಿಮ್ಮ ಆಶೀರ್ವಾದದಿಂದಲೇ ನಾನು ಆರಿಸಿ ಬಂದು ಸಚಿವನಾಗಿದ್ದೇನೆ. ಯಾದಗಿರಿ ಜಿಲ್ಲೆಯನ್ನು ರಾಜ್ಯದಲ್ಲಿಯೇ ಮಾದರಿ ಜಿಲ್ಲೆಯಾಗಿ ರೂಪಿಸಲು ತಮ್ಮ ಸಹಕಾರ ಅವಶ್ಯ ಎಂದರು.
ಟೋಕರಿ ಕೋಲಿ ಸಮಾಜದ ಅಧ್ಯಕ್ಷ ಉಮೇಶ ಮುದ್ನಾಳ ಮಾತನಾಡಿ, ಕಬ್ಬಲಿಗ ಸಮಾಜದ ಏಕೈಕ ಸಚಿವರಾದ ತಾವು ಉತ್ತಮವಾಗಿ ಕೆಲಸ ಮಾಡುವುದರ ಮೂಲಕ ಸಮಾಜದ ಕೀರ್ತಿ ಪತಾಕೆಯನ್ನು ಹಾರಿಸಬೇಕು. ಅಲ್ಲದೇ ನಮ್ಮ ಸಮಾಜದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಕೋರಿದರು.
ಡಾ. ಎಂ.ಎಸ್. ಸಿರವಾಳ ಮಾತನಾಡಿ, ಹಿಂದುಳಿದ ಹೈದ್ರಾಬಾದ್ ಕರ್ನಾಟಕದಿಂದ ಸಚಿವರಾದ ತಾವು ಆ ಭಾಗಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿಶೇಷ ಅನುದಾನಗಳನ್ನು ತಂದು ಹಿಂದುಳಿದ ಭಾಗ ಎಂಬ ಹಣೆಪಟ್ಟಿ ತೆಗೆದು ಹಾಕಲು ಶ್ರಮಿಸಬೇಕು. ಈ ಭಾಗದ ನಿರುದ್ಯೋಗಿ ವಿದ್ಯಾವಂತರು, ಬಡವರು, ಕಾರ್ಮಿಕರು ರೈತರು ತಮ್ಮ ಮೇಲೆ ಅಪಾರ ಪ್ರೀತಿ ಹಾಗೂ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರ ಭರವಸೆಗೆ ತಕ್ಕಂತೆ ಕೆಲಸ ಮಾಡಿ, ನಮ್ಮ ಸಹಕಾರ ಸದಾಕಾಲ ಇರುತ್ತದೆ ಎಂದು ಸಲಹೆ ನೀಡಿದರು. ಭೀಮರಾಯ ಗಣಪುರ, ಮಲ್ಲಪ್ಪ ಅರಿಕೇರಿ, ರಾಮು ಗಣಪುರ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement