19ರಂದು ಚಿಂಚನಸೂರಗೆ ಕೋಲಿ ಸಮಾಜ ಸನ್ಮಾನ
ಯಾದಗಿರಿ: ಜಿಲ್ಲಾ ಕೋಲಿ ಸಮಾಜದ ವತಿಯಿಂದ ಜವಳಿ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ್ ಅವರನ್ನು ಜೂ.19ರಂದು ಸಂಜೆ 4 ಗಂಟೆಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಅಂದು ಗಂಗಾ ಪರಮೇಶ್ವರಿ ಭವನದ ಉದ್ಘಾಟನೆ, ಗಂಗಾ ಜಯಂತಿ ಹಾಗೂ ಅಭಿನವ ಡಾ. ರಾಜಕುಮಾರರೆಂದು ಖ್ಯಾತರಾದ ಅಶೋಕ ಬಸ್ತಿ ಹಾಡಿದ ಅಂಬಿಗರ ಚೌಡಯ್ಯ ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಮಾಜದ ನಗರ ಅಧ್ಯಕ್ಷ ಮಹಾದೇವ ಗಣಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.