ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

23ರಿಂದ ಹರಿದಾಸ ವೈಭವ ಸಂಗೀತ

Lingaraj Badiger
Updated On : 10 Jun 2013, 11:30 am

ಗುಲ್ಬರ್ಗ: ಹರಿದಾಸ ಸಾಹಿತ್ಯ ವಿಚಾರ ವಾಹಿನಿ ವೇದಿಕೆ ಹಾಗೂ ಸ್ವರಮಾಧುರಿ ಸಂಗೀತ ವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಜೂ.23 ಹಾಗೂ 24ರಂದು ಎರಡು ದಿನಗಳ ಕಾಲ ಸಂಜೆ 6 ಗಂಟೆಯಿಂದ ನೂತನ ವಿದ್ಯಾಲಯದ ಸಂಗಮೇಶ್ವರ ಸಭಾಗೃಹದಲ್ಲಿ ಹರಿದಾಸ ವೈಭವ ಕಾರ್ಯಕ್ರಮ ಆಯೋಜಿಸಲಾಗಿದೆ. ಖ್ಯಾತ ಸಂಗೀತಗಾರ ಅನಂತ ಕುಲಕರ್ಣಿ ಬಾಗಲಕೋಟೆ ಹಾಗೂ ಸಂಗೀತ ಕಾಖಂಡಕಿ ಮುಖ್ಯ ಸಂಗೀತಗಾರರಾಗಿ ಆಗಮಿಸಲಿದ್ದಾರೆ. ಇವರೊಂದಿಗೆ ಸ್ಥಳೀಯ ಉದಯೋನ್ಮುಖ ಸಂಗೀತಗಾರರಿಗೆ ವೇದಿಕೆ ಒದಗಿಸಲಾಗುತ್ತಿದೆ. ದಾಸ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಸನ್ಮಾನ, ಹಿರಿಯ ಸಂಗೀತ ಕಲಾವಿದರಿಗೆ ಹರಿದಾಸ ಸಂಗೀತ ರತ್ನ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕಳೆದ ಸಲ ಈ ಪ್ರಶಸ್ತಿಗೆ ಖ್ಯಾತ ಸಂಗೀತಗಾರ ಪುತ್ತೂರು ನರಸಿಂಹನಾಯಕ ಅವರು ಆಯ್ಕೆಯಾಗಿದ್ದರು.    ಡಾ. ಸ್ವಾಮಿರಾವ ಕುಲಕರ್ಣಿ ಬರೆದಿರುವ ಮಂತ್ರಾಲಯ ಮಠದಿಂದ ಪ್ರಕಟಗೊಂಡ ಶ್ರೀರಾಮದಾಸರ(ಪಿಂಜಾರ ಬಡೇಸಾಬ್) ಬದುಕು ಮತ್ತು ಸಾಹಿತ್ಯ, ಕೃತಿಯು ಬಿಡುಗಡೆಯಾಗಲಿದೆ ಎಂದು ಹರಿದಾಸ ಸಾಹಿತ್ಯ ವಿಚಾರ ವಾಹಿನಿ ವೇದಿಕೆ ಅಧ್ಯಕ್ಷ ಡಾ. ಸ್ವಾಮಿರಾವ ಕುಲಕರ್ಣಿ ಹಾಗೂ ಮಹೇಶಕುಮಾರ ಬಡಿಗೇರ ತಿಳಿಸಿದ್ದಾರೆ.
ಡೆಂಘೀ; ಎಚ್ಚರಿಕೆ  ಕ್ರಮ
ಯಾದಗಿರಿ: ತಾಲೂಕಿನ ಯರಗೋಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡೆಂಘೀ ಜ್ವರದ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಕುರಿತು ಈಚೆಗೆ ಸಭೆ ನಡೆಸಲಾಯಿತು. ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಎಸ್.ಎಸ್. ಗುಣರ್ ಮಾತನಾಡಿ, ಈಡಿಸ್ ಇಜಿಪ್ಟೈ ಸೊಳ್ಳೆಯು ನೀರಿನಲ್ಲಿ ಸಂತಾನಾಭಿವೃದ್ಧಿ ಮಾಡುತ್ತದೆ. ಅಲ್ಲದೆ ಇದು ಹಗಲು ಹೊತ್ತಿನಲ್ಲಿ ಮಾತ್ರ ಮನುಷ್ಯರನ್ನು ಕಚ್ಚುತ್ತದೆ. ಇದ್ದಕ್ಕಿಂದಂತೆ ತೀವ್ರ ಜ್ವರ ಬರುವುದು, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು ಈ ರೋಗದ ಲಕ್ಷಣಗಳಾಗಿದೆ ಎಂದು ತಿಳಿಸಿದರು. ಈ ರೋಗಕ್ಕೆ ನಿರ್ದಿಷ್ಟವಾದ ಔಷಧಿ ಅಥವಾ ಲಸಿಕೆ ಇರುವುದಿಲ್ಲ. ಈ ರೋಗದ ಲಕ್ಷಣ ಕಂಡುಬಂದಲ್ಲಿ ತಕ್ಷಣ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬಹುದು. ಡೆಂಘೀ ಲಕ್ಷಣ ಕಂಡು ಬಂದರೆ ಹತ್ತಿರದ ಸರ್ಕಾರಿ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಲ್ಲಿ ಪರೀಕ್ಷಿಸಿಕೊಂಡು ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು. ಪರಿಸರವನ್ನು ಸ್ವಚ್ಛವಾಗಿಟ್ಟುಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement