ಎಸ್ಬಿಎಚ್ನಿಂದ ಫ್ಯಾನ್ ವಿತರಣೆ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.9
ನಗರದ ವಿದ್ಯಾನಗರ ಶಾಖೆಯ ಎಸ್ಬಿಎಚ್ ಬ್ಯಾಂಕ್ ವತಿಯಿಂದ ಸಿದ್ದಾರ್ಥ ನಗರದ ಎಂಎಸ್ಕೆ ಮಿಲ್-2 ಸರ್ಕಾರಿ ಪ್ರಾಥಮಿಕ ಶಾಲೆಗೆ ಸಮುದಾಯ ವಿಕಾಸ ಯೋಜನೆಯ ಅಡಿಯಲ್ಲಿ ಶಾಲೆಯ ಎಲ್ಲ ಕೊಠಡಿಗಳಿಗೆ ಉಚಿತವಾಗಿ ಫ್ಯಾನ್ಗಳನ್ನು ವಿತರಿಸಲಾಯಿತು. ಶಾಖಾ ವ್ಯವಸ್ಥಾಪಕ ಬಸವಣ್ಣಪ್ಪ ಮಾತನಾಡಿ, ಆಧುನಿಕ ಕಾಲದಲ್ಲಿ ಬಡ ಮಕ್ಕಳಿಗೆ ಮೂಲ ಸೌಕರ್ಯಗಳನ್ನು ಒದಗಿಸಿದಾಗ ಮಾತ್ರ ಪರಿಣಾಮಕಾರಿಯಾಗಿ ಬೋಧನೆ ಮಾಡಿ ಒಳ್ಳೆಯ ಶಿಕ್ಷಣ ನೀಡಲಾಗುವುದು ಎಂದರು. ಈ ಸಮಾರಂಭದಲ್ಲಿ ಶಾಲೆಯ ಮುಖ್ಯಗುರು ಸಂಪತ್ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾನಗರ ಎಸ್ಬಿಎಚ್ ಬ್ಯಾಂಕಿನ ಉಪ ವ್ಯವಸ್ಥಾಪಕ ಅನಿಲ ಕುಲಕರ್ಣಿ ಅತಿಥಿಗಳಾಗಿ ಆಗಮಿಸಿದ್ದರು. ಯುವ ಮುಖಂಡ ಶಿವಕುಮಾರ ದೊಡ್ಡಮನಿ, ಬ್ಯಾಂಕಿನ ಸಿಬ್ಬಂದಿ ಮಾಜೀದ್, ಶಾಲೆಯ ಸಿಬ್ಬಂದಿ ವರ್ಗ ಹಾಗೂ ಶಾಲೆಯ ಮಕ್ಕಳು ಹಾಜರಿದ್ದರು.
ಕೆಜೆಪಿಗೆ ನೇಮಕ
ಗುಲ್ಬರ್ಗ: ಕರ್ನಾಟಕ ಜನತಾ ಪಕ್ಷದ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ ರಾಜಶೇಖರ ಬಸಣ್ಣ ರಾಜೇಶ್ವರ ಅವರನ್ನು ನೇಮಕ ಮಾಡಲಾಗಿದೆ ಎಂದು ಅಧ್ಯಕ್ಷ ಬಸವರಾಜ ಇಂಗಿನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.