ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಂಠಿತಾಂಡಾ; ಕುಡಿವ ನೀರಿಗಾಗಿ ಪರದಾಟ

Lingaraj Badiger
Updated On : 11 Jun 2013, 11:24 am

ಯಾದಗಿರಿ: ಶಹಾಪುರ ತಾಲೂಕಿನ ವಡಗೇರಾ ಸಮೀಪದ ಕಂಠಿತಾಂಡಾದಲ್ಲಿ ಕೊಳವೆ ಬಾವಿಗಳು ಕೆಟ್ಟುಹೋಗಿದ್ದು, ಕುಡಿವ ನೀರಿಗಾಗಿ ಪರದಾಡುವಂತಾಗಿದೆ ಎಂದು ಗ್ರಾಪಂ ಸದಸ್ಯ ಗೋಪಾಲ ನಾಯಕ ದೂರಿದ್ದಾರೆ.
ತಾಂಡಾದಲ್ಲಿ ಕಿರು ನೀರು ಸರಬರಾಜು ಕೇಂದ್ರವಿದೆ. ಆದರೆ ಅದು ಸಮರ್ಪಕವಾಗಿ ಕಾರ್ಯನಿರ್ವಹಿಸಿಸುತ್ತಿಲ್ಲ. ವಿದ್ಯುತ್ ಇದ್ದರೆ ಮಾತ್ರ ತಾಂಡಾ ನಿವಾಸಿಗಳು ಕುಡಿವ ನೀರನ್ನು ಕಾಣುತ್ತಾರೆ. ಇಲ್ಲದಿದ್ದರೆ ನೀರಿಲ್ಲ ಎಂಬ ಪರಿಸ್ಥಿತಿಯಿದೆ. ಆದ್ದರಿಂದ ನೀರಿಗಾಗಿ ಅಲೆಯುವುದು ಸಾಮಾನ್ಯವಾಗಿದೆ. ತಾಂಡಾದಲ್ಲಿ ಇದ್ದ ನಾಲ್ಕು ಬೋರ್‌ವೆಲ್‌ಗಳು ಸಂಪೂರ್ಣವಾಗಿ ಹಾಳಾಗಿ ತಿಂಗಳುಗಳೇ ಕಳೆದಿವೆ. ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ.
ತಾಂಡಾದಲ್ಲಿ ಸರಿಯಾಗಿ ವಿದ್ಯುತ್ ಇರುವುದಿಲ್ಲ. ಇದರಿಂದಾಗಿ ಕಿರು ನೀರು ಸರಬರಾಜು ಕೇಂದ್ರದಿಂದ ಬರುವ ನೀರಿಗಾಗಿ ನಿವಾಸಿಗಳು ಜಗಳವಾಡುವುದು ಸಾಮಾನ್ಯವಾಗಿದೆ. ಸರತಿಯ ಸಾಲಿನಲ್ಲಿ ಕೊಡಗಳನ್ನಿಟ್ಟರೂ ಕೆಲವೊಂದು ವೇಳೆ ನೀರು ಸಿಗುವುದಿಲ್ಲ. ಆದ್ದರಿಂದಶಹಾಪುರ ತಾಪಂ ಇಒ ಅವರು ಗಮನ ಹರಿಸಿ ತಾಂಡಾದಲ್ಲಿ ಕೆಟ್ಟಿರುವ ಬೋರ್‌ವೆಲ್‌ಗಳನ್ನು ದುರಸ್ತಿ ಮಾಡಲು ಸಂಬಂಧಪಟ್ಟವರಿಗೆ ಸೂಚಿಸಬೇಕು. ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement