ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಜೂಜು ಅಡ್ಡೆ ಮೇಲೆ ದಾಳಿ, ಏಳು ಜನರ ಬಂಧನ

Lingaraj Badiger
Updated On : 11 Jun 2013, 11:31 am

ಗುರುಮಠಕಲ್: ಪಟ್ಟಣದ ಹೊರ ವಲಯಗಳಲ್ಲಿ ಜೂಜಾಟದಲ್ಲಿ ನಿರತರಾಗಿದ್ದವರ ಮೇಲೆ ಸೋಮವಾರ ಪೊಲೀಸರು ದಾಳಿ ನಡೆಸಿ 7 ಜನರನ್ನು ಬಂಧಿಸಿದ್ದಾರೆ. ಅವರಿಂದ 6 ಸಾವಿರ ವಶಪಡಿಸಿಕೊಂಡಿದ್ದಾರೆ. ಪಟ್ಟಣದಲ್ಲಿ ಕಳೆದ ಕೆಲವು ತಿಂಗಳಿಂದ ಜೂಜು ವ್ಯಾಪಕವಾಗಿ ನಡೆಯುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಪಟ್ಟಣದ ಕಲಾಲವಾಡಿಯ ಮನೆಯೊಂದರ ಮೇಲೆ ದಾಳಿ ಮಾಡಿ ಜೂಜಾಟದಲ್ಲಿ ನಿರತರಾಗಿದ್ದ ಪ್ರಕಾಶ ವಾಳಾಪುರ, ಶಿವು ಮಠಪತಿ, ಸೈಯದ್ ಅಬ್ದುಲ್, ಅಮರನಾಥ ಕಲಾಲ, ಶರಣಪ್ಪ ಅಕ್ಕರಗಲ್, ಶ್ರೀನಿವಾಸ ಅಗ್ಸರ್, ದೇವೀಂದ್ರಪ್ಪ ಮಾದ್ವಾರ ಎಂಬವರನ್ನು ಬಂಧಿಸಿದ್ದಾರೆ. ಬಂಧಿತರಿಂದ 6215 ವಶಕ್ಕೆ ಪಡೆದಿದ್ದು, ಗುರುಮಠಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುರುಮಠಕಲ್ ಪಿಎಸ್‌ಐ ಎಲ್.ಸಿ. ಕೋಲಕರ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸಿಬ್ಬಂದಿ ಸಂಗಪ್ಪ, ಸಿದ್ದವೀರಪ್ಪ, ಶಿವಪ್ಪ, ರೇಣುಕಾರಾಜ, ಮಂಜುನಾಥ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement