ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಲಗರ ಬಸಂತಪುರ ಗ್ರಾಪಂಗೆ ಅವಿರೋಧ ಆಯ್ಕೆ

Lingaraj Badiger
Updated On : 11 Jun 2013, 11:26 am

ತಾಲೂಕಿನ ಸಲಗರ ಬಸಂತಪುರ ಗ್ರಾಮ ಪಂಚಾಯಿತಿ 2ನೇ ಅವಧಿಗೆ ನಡೆದ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಹಣಮಂತರೆಡ್ಡಿ, ಉಪಾಧ್ಯಕ್ಷರಾಗಿ ಗಂಗಮ್ಮ ವೆಂಕಟೇಶ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಸಲಗರ ಬಸಂತಪುರ ಗ್ರಾಪಂ ಕಾರ್ಯಾಲಯದಲ್ಲಿ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಸಾಮಾನ್ಯ ಅಧ್ಯಕ್ಷ ಸ್ಥಾನಕ್ಕೆ ಹಣಮಂತರೆಡ್ಡಿ ರಾಮರೆಡ್ಡಿ ಎಲಮೂರ ಮತ್ತು ಉಪಾಧ್ಯಕ್ಷ ಬಿಸಿ(ಬ) ಮಹಿಳಾ ಸ್ಥಾನಕ್ಕೆ ಗಂಗಮ್ಮ ವೆಂಕಟೇಶ ತಲಾ ಒಂದೊಂದು ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾರಿಂದಲೂ ನಾಮಪತ್ರ ಸಲ್ಲಿಕೆಯಾಗದ ಕಾರಣ 2ನೇ ಅವಧಿಗೆ ಅಧ್ಯಕ್ಷರಾಗಿ ಹಣಮಂತರೆಡ್ಡಿ ರಾಮರೆಡ್ಡಿ ಎಲಮೂರ ಮತ್ತು ಉಪಾಧ್ಯಕ್ಷೆಯಾಗಿ ಗಂಗಮ್ಮ ವೆಂಕಟೇಶ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ತಹಸೀಲ್ದಾರ್ ಜಗನ್ನಾಥರೆಡ್ಡಿ ಧರ್ಮರೆಡ್ಡಿ ಘೋಷಿಸಿದರು. ಪಿಡಿಒ ಸಂಗಾರೆಡ್ಡಿ ಚಿಮ್ಮನಚೋಡ, ಬಸವರಾಜ ಚಿಮ್ಮಾಇದಲಾಯಿ ಚುನಾವಣೆ ಸಂದರ್ಭದಲ್ಲಿ ಹಾಜರಿದ್ದರು.ಅಭಿನಂದನೆ: ಹಣಮಂತರೆಡ್ಡಿ ರಾಮರೆಡ್ಡಿ ಅವರನ್ನು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಪಾಟೀಲ್, ತಾಪಂ ಸದಸ್ಯೆ ಶಶಿಕಲಾ ಪಾಟೀಲ್, ವಿಠ್ಠಲರೆಡ್ಡಿ ಬೆನಕೆಪಳ್ಳಿ, ರೇವಣಸಿದ್ದ ಕೋಡ್ಲಿ, ಹಣಮಂತ ಮಾಡಬೂಳ, ತಾರಾಸಿಂಗ್ ದಳಪತಿ, ಸೈಯದ್ ಹುಸೇನ್, ರಫೀಕ್, ತಿಪ್ಪಣ್ಣ ವಾಲಿ, ಗಾಂಧೀಜಿ ಪಾಟೀಲ್, ಮಲ್ಲಪ್ಪರೆಡ್ಡಿ ಮುಂತಾದವರು ಅಭಿನಂದಿಸಿದರು.
ನಂತರ ಬೆನಕೆಪಳ್ಳಿ ಮತ್ತು ಸಲಗರ ಬಸಂತಪುರ ಗ್ರಾಮದಲ್ಲಿ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಸಬ್ ಇನ್ಸ್‌ಪೆಕ್ಟರ್ ಸುರೇಶ ಬೆಂಡೆಗುಂಬಳ ಸೂಕ್ತ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆಗೊಳಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement