ಅನಧಿಕೃತ ಸಾರಾಯಿ ಮಾರಾಟ 3 ವರ್ಷ ಕಾರಾಗೃಹ ಶಿಕ್ಷೆ, ದಂಡ
ಗುಲ್ಬರ್ಗ: ಅಪಾಯವುಂಟು ಮಾಡುವ ಕಲಬೆರಕೆ ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಗೆ ಜೆಎಂಎಫ್‌ಸಿ ನ್ಯಾಯಾಲಯ 3 ವರ್ಷ ಶಿಕ್ಷೆ ಹಾಗೂ 22 ಸಾವಿರ ದಂಡ ವಿಧಿ ಆದೇಶಿಸಿದೆ.
ಗುಲ್ಬರ್ಗದ ಭರತ ನಗರ ತಾಂಡಾದಲ್ಲಿ ಏ.3ರಂದು ಸಂಜೆ 6.05ಕ್ಕೆ ಪರಶುರಾಮ ಎಂಬಾತನು ಮನೆಯ ಮುಂದಿನ ರಸ್ತೆಯಲ್ಲಿ ಜೀವಕ್ಕೆ ಅಪಾಯವುಂಟು ಮಾಡುವ ಕಲಬೆರಕೆ ಕಳ್ಳಭಟ್ಟಿ ಸಾರಾಯಿಯನ್ನು ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಬಾಬು ಎಂಬಾತ ಕಳ್ಳಭಟ್ಟಿಯನ್ನು ಖರೀದಿಸಿದ್ದಾಗ ಪೊಲೀಸರು ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಕರಣ ವಿಚಾರಣೆ ನಡೆಸಿದ ಗುಲ್ಬರ್ಗ ಪ್ರಧಾನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆದು ಆರೋಪಿ ತಪ್ಪಿತಸ್ಥನೆಂದು ಸಾಕ್ಷ್ಯಾಧಾರಗಳಿಂದ ಕಂಡು ಬಂದಿರುವುದರಿಂದ ಪರಶುರಾಮನಿಗೆ 3 ವರ್ಷ ಶಿಕ್ಷೆ ಹಾಗೂ 22 ಸಾವಿರ ದಂಡ ವಿಧಿಸಿ ಆದೇಶಿಸಿರುತ್ತಾರೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಎಸ್.ಆರ್. ನರಸಿಂಹಲು ವಾದ ಮಂಡಿಸಿದ್ದಾರೆ.