ದಲಿತ ಸಂಘರ್ಷ ಸಮಿತಿಗೆ ಸೇರ್ಪಡೆ
ಗುಲ್ಬರ್ಗ: ಗುಲ್ಬರ್ಗ ಸಂಚಾಲಕ ರವಿ ಮದನಕರ್ ಸಮ್ಮುಖದಲ್ಲಿ ದಲಿತ ಚಳವಳಿ ಮುಖಂಡರಾದ ಮಲ್ಲೇಶ ಸಜ್ಜನ್, ಅರ್ಜುನ ಭದ್ರೆ, ಭೀಮಶಾ ಖನ್ನಾ, ಶಿವಮೂರ್ತಿ ಶಾಸ್ತ್ರಿ, ಶಾಮರಾವ ಸಿಂಧೆ, ರಾಯಪ್ಪ ಪೂಜಾರಿ, ಜಬ್ಬಾರ ಖಾನ್, ಶಿವಶರಣಪ್ಪ ಕಾಂತಾ, ಹಣಮಂತ ಬರಗಾಲಿ, ಮಹಾಂತೇಶ ಬಡದಾಳ, ವಿಠ್ಠಲ್ ತೆಗನೂರ ಹಾಗೂ ಸಾತಪ್ಪ ತೆಗನೂರ ಅವರು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಸೇರ್ಪಡೆಯಾಗಿದ್ದಾರೆ. ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ, ಬೆಂಗಳೂರು ನಗರ ಸಂಚಾಲಕ ಜೀವನ ಹಳ್ಳಿ ಆರ್. ವೆಂಕಟೇಶ, ಗುಲ್ಬರ್ಗ ಸಂಚಾಲಕ ರವಿ ಮದನಕರ್ ಸಮಿತಿಗೆ ಸೇರ್ಪಡೆಗೊಂಡ ಮುಖಂಡರಿಗೆ ಸ್ವಾಗತಿದರು.