ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಯುಕೆಪಿ ಕ್ಯಾಂಪಿನ ಅತಿಕ್ರಮಣ ಜಾಗ ತೆರವು

Lingaraj Badiger
Updated On : 13 Jun 2013, 10:54 am

ಹುಣಸಗಿ: ಹುಣಸಗಿಯ ಯುಕೆಪಿ ಕ್ಯಾಂಪಿನಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಶೆಡ್‌ಗಳು, ಅಂಗಡಿಗಳು ಹಾಗೂ ಮನೆಗಳ ಅಕ್ರಮ ಗೋಡೆಗಳನ್ನು ನಾರಾಯಣಪುರ ಅಧೀಕ್ಷಕ ಅಭಿಯಂತರರ ನೇತೃತ್ವದಲ್ಲಿ ಬುಧವಾರ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಯಿತು. ನಿಗಮದ ಅನುಮತಿಯಿಲ್ಲದ ಹಿಟ್ಟಿನ ಗಿರಣಿ ಹಾಗು ಇತರೆ ಅಂಗಡಿಗಳನ್ನು ನಿಗಮದ ಸಿಬ್ಬಂದಿ ಸೀಜ್ ಮಾಡಿದರು.
ಈ ಸಂದರ್ಭದಲ್ಲಿ ಅಧೀಕ್ಷಕ ಅಭಿಯಂತರ ಎಸ್. ಭೋಜಾನಾಯಕ ಸುದ್ದಿಗಾರರೊಂದಿಗೆ ಮಾತನಾಡಿ, ನಿಗಮದ ಆಸ್ತಿಯನ್ನು ಯಾರೇ ಆಗಲಿ ಅನಧಿಕೃತವಾಗಿ ಕಬಳಿಸುತ್ತಿದ್ದುದು ಕಂಡು ಬಂದರೆ ಅಂಥವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಒತ್ತುವರಿ ತೆರವು: ಹುಣಸಗಿ ಕ್ಯಾಂಪ್ ನಿರ್ವಹಣೆ ಎಂಜಿನಿಯರುಗಳಿಗೆ ಅಕ್ರಮವಾಗಿ ಜಾಗ ಕಬಳಿಸುವವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ಅವರು ಸೂಚಿಸಿದರು.
  ಈ ಸಂದರ್ಭದಲ್ಲಿ ಉಪ ನೋಂದಣಿ ಕಚೇರಿಯ ಮುಂಭಾಗದ, ಕೊಡೇಕಲ್ ರಸ್ತೆಯ ಬದಿಯ ಒತ್ತುವರಿ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಲಾಯಿತು. ಕೆಲವು ಕಡೆ ತೀವ್ರ ಅಂಗಡಿ ಮಾಲೀಕರು ಮಾತಿನ ಚಕಮಕಿ ನಡೆಸಿದರು.
ಪಿಎಸ್‌ಐ ವೀರಣ್ಣ ಹಳ್ಳಿ ತಮ್ಮ ಸಿಬ್ಬಂದಿಯೊಂದಿಗೆ ಬಂದೋಬಸ್ತ್ ಒದಗಿಸಿದರು. ಪೊಲೀಸರು ಸ್ಥಳದಲ್ಲಿ ಇದ್ದುದರಿಂದ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಕಾರ್ಯಪಾಲಕ ಅಭಿಯಂತರ ಲೋಕೇಶಪ್ಪ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಚಂದ್ರಶೇಖರ ಕಕ್ಕೇರಿ, ಎಂಜಿನಿಯರುಗಳಾದ ಬೈಲಪ್ಪಾ, ಅಶೋಕಕುಮಾರ ಹಾಗೂ ಸಿಬ್ಬಂದಿ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ತಡವಾಗಿಯಾದರೂ ನಿಗಮ ತನ್ನ ಆಸ್ತಿ ಉಳಿಸಿಕೊಳ್ಳುವಲ್ಲಿ ಕಾರ್ಯಾಚರಣೆ ನಡೆಸಿರುವುದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement