ಇಂದು ಶಿಬಿರ
ಗುಲ್ಬರ್ಗ: ಮಹಿಳೆ ಮತ್ತು ಹಿರಿಯ ನಾಗರಿಕರಿಗೆ ಮತ್ತು ಸಾಮಾನ್ಯ ಜನತೆಗೆ ಜೂ.14 ರಂದು ಬೆಳಗ್ಗೆ 10ಕ್ಕೆ ನಗರದ ಜಗತ್ ವೃತ್ತದ ಮಾಡಗಿ ಕಾಂಪ್ಲೆಕ್ಸ್‌ನಲ್ಲಿರುವ ಶಿವರುದ್ರ ಟ್ರಸ್ಟ್ ಕಚೇರಿಯಲ್ಲಿ ಉಚಿತ ಎಲುಬಿನ, ಮೆದುಳು, ನರರೋಗ ಮತ್ತು ಸಾಮಾನ್ಯ ರೋಗಗಳ ಕುರಿತು ಚಿಕಿತ್ಸಾ ಶಿಬಿರ ನಡೆಸಲಾಗುವುದು ಎಂದು ಟ್ರಸ್ಟ್‌ನ ಕಾರ್ಯದರ್ಶಿ ಮಹಾಲಿಂಗ ಎಸ್. ಮಹಾಗಾಂವಕರ್ ತಿಳಿಸಿದ್ದಾರೆ. ಜಿಲ್ಲಾ ವರಿಷ್ಠಾಧಿಕಾರಿ ಸತೀಶಕುಮಾರ್ ಶಿಬಿರಕ್ಕೆ ಚಾಲನೆ ನೀಡಲಿದ್ದಾರೆ. ಉಪ ನಿರ್ದೇಶಕಿ ರತ್ನಾ ಕಲಂದಾನಿ ಅಧ್ಯಕ್ಷತೆ ವಹಿಸುವರು. ಎಲುಬು ಮತ್ತು ಕೀಳುಗಳ ತಜ್ಞ ಡಾ. ಎಸ್.ಎಸ್. ಗುಬ್ಬಿ, ನಿವೃತ್ತ ವೈದ್ಯ ಡಾ. ಎ.ವಿ. ದೇಶಮುಖ, ಮೆದುಳು ಮತ್ತು ನರರೋಗ ತಜ್ಞ ಡಾ. ಶರಣಗೌಡ ಪಾಟೀಲ್, ಪಿಜಿಯೋಥೆರಪಿಸ್ಟ್ ಡಾ. ಸಂಗಮೇಶ ಹತ್ತಿ, ಪ್ರಿಯದರ್ಶಿನಿ ಪಾಲ್ಗೊಂಡು ಚಿಕಿತ್ಸೆ ನೀಡಲಿದ್ದಾರೆ. ಹಿರಿಯ ನಾಗರಿಕರು, ಮಹಿಳೆಯರು ಭಾಗವಹಿಲು ಕೋರಿದ್ದಾರೆ.
3 ಕೃತಿಗಳು ಆಯ್ಕೆ
ಗುಲ್ಬರ್ಗ: 2011 ರಲ್ಲಿ ಪ್ರಕಟಿತ ವೈಚಾರಿಕ ಹಾಗೂ ವಚನ ಸಾಹಿತ್ಯ ಕುರಿತಾದ ಕೃತಿಗಳನ್ನು ಅಮರಮ್ಮ ಚನ್ನಬಸವಪ್ಪ ಬೆಟ್ಟದೂರ ಪ್ರತಿಷ್ಠಾನವು ಮೂರು ಕೃತಿಗಳನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಿದೆ. ಡಾ. ಮಲ್ಲಿಕಾ ಘಂಟಿ ರಚಿಸಿದ 'ಒಳಗೆ ಸತ್ತು ಹೊರಗೆ' ಡಾ. ಜಿ.ಎಸ್. ಉಪಾಧ್ಯ ರಚಿಸಿದ ಅನುಭಾವ ಸಾಹಿತ್ಯದ 'ವಿಭಿನ್ನ ನೆಲೆಗಳು' ಹಾಗೂ ಅಬ್ಬಾಸ ಮೇಲಿನಮನಿ ರಚಿಸಿದ 'ಬಯಲ ಗಾಳಿಯ ಪರಿಮಳ ಕೃತಿಗಳು' ಆಯ್ಕೆಯಾಗಿವೆ.
ನಿಧನಕ್ಕೆ ಶೋಕ
ಗುಲ್ಬರ್ಗ/ಶಹಾಬಾದ್: ರಸ್ತೆ ಅಪಘಾತದಲ್ಲಿ ಬುಧವಾರ ನಿಧನರಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಳ್ಳಾರಿ ವಿಭಾಗ ಪ್ರಚಾರಕ ಗಣೇಶಜೀ ಅವರ ನಿಧನಕ್ಕೆ ನಗರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಶೋಕ ಸಂತಾಪ ಸಭೆ ನಡೆಸಲಾಯಿತು. ಸಂಘದ ಬಲರಾಮ ಕೋಬಾಳಕರ್ ಮಾತನಾಡಿ, ಉಡುಪಿ ಜಿಲ್ಲೆಯ ಕುಂದಾಪುರದವರಾದ ಗಣೇಜೀಯವರು ಗುಲ್ಬರ್ಗ ವಿಭಾಗ, ಶಿರಸಿ ವಿಭಾಗದಲ್ಲಿ ಸಂಘದ ಪ್ರಚಾರಕರಾಗಿ ಸುಮಾರು 15 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರು. ಅವರು ಬುಧವಾರ ರಾಯಚೂರಿನಿಂದ ಬಳ್ಳಾರಿಗೆ ತೆರಳುತ್ತಿರುವ ಮಾರ್ಗದಲ್ಲಿ ಸಿಂಧನೂರು ಬಳಿ ಕಾರು ಅಪಘಾತದಲ್ಲಿ ಮೃತರಾಗಿದ್ದು, ಸಂಘಕ್ಕೆ ನಷ್ಟವಾಗಿದೆ ಎಂದರು. ಅವರ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು. ಬಿಜೆಪಿ ಜಿಲ್ಲಾ ಮುಖಂಡರಾದ ಶಾಂತರೆಡ್ಡಿ ದಂಡಗುಲಕರ್, ಬಸವರಾಜ ಮದ್ರಕಿ, ನಗರ ಬಿಜೆಪಿ ಅಧ್ಯಕ್ಷ ಡಾ. ಅಶೋಕ ಝಿಂಗಾಡೆ, ಅನೀಲ್ ಹೀಬಾರೆ, ರಾಮು ಕುಸಾಳೆ, ಸ್ವಯಂ ಸೇವಕರು, ಬಿಜೆಪಿ, ವಿಹಿಂಪ, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಹತ್ತಿಗುಡುರ ನಿಧನ
ಜೇವರ್ಗಿ: ತಾಲೂಕಿನ ಬಿರಾಳ (ಬಿ) ಗ್ರಾಮದ ವ್ಯಾಪಾರಸ್ಥ ಪ್ರಭು ಸಂಗಪ್ಪ ಹತ್ತಿಗುಡುರ (48) ಅವರು ಗುರುವಾರ ಸಂಜೆ ನಿಧನ ಹೊಂದಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು, ಒಬ್ಬ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಶುಕ್ರವಾರ ಮಧ್ಯಾಹ್ನ 1ಕ್ಕೆ ಸ್ವಗ್ರಾಮ ಬಿರಾಳ(ಬಿ)ಯಲ್ಲಿ ನಡೆಯಲಿದೆ. ಪ್ರಭು ನಿಧನಕ್ಕೆ ಅಡತ್ ವರ್ತಕರ ಸಂಘದ ಶರಣಗೌಡ ಗುಳ್ಯಾಳ, ಸಿದ್ದುಗೌಡ ಹಳ್ಳಿ, ಶ್ಯಾಮರಾವ, ಅಣ್ಣಾರಾಯಗೌಡ, ಬಸವರಾಜ ಸಾಸಾಬಾಳ, ಪ್ರಕಾಶ ಹರನೂರ ಶೋಕ ವ್ಯಕ್ತಪಡಿಸಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.